ಈ ಐದು ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿ, ಗೆಲುವು ನಿಮ್ಮದೇ : ಸಿದ್ದರಾಮಯ್ಯಗೆ ಆಪ್ತರ ಸಲಹೆ

ಬೆಂಗಳೂರು : ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿದೆ. ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯಗೆ ಆಪ್ತರು 5 ಕ್ಷೇತ್ರಗಳ ಆಯ್ಕೆಯನ್ನು ನೀಡಿದ್ದಾರೆ.
ಈ ಐದರಲ್ಲಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ.
ವರುಣಾ ಸಿದ್ದರಾಮಯ್ಯರ ತವರು ಕ್ಷೇತ್ರವಾಗಿದ್ದು, ಅಲ್ಲಿ ಸ್ಪರ್ಧಿಸಿದ್ರೆ ಗೆಲುವು ಖಂಡಿತ. ಚಾಮರಾಜಪೇಟೆ ಸಿದ್ದರಾಮಯ್ಯರ ಆಪ್ತ ಜಮೀರ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಹೆಬ್ಬಾಳ ಸಿದ್ದರಾಮಯ್ಯ ಅವರ ಆಪ್ತ ಭೈರತಿ ಸುರೇಶ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಬಾದಾಮಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರತಿಧಿಸಿದ್ದ ಕ್ಷೇತ್ರವಾಗಿದೆ, ಇಲ್ಲಿ ಸ್ಪರ್ಧಿಸಿದ್ರೆ ಗೆಲುವು ಫಿಕ್ಸ್ ಎಂದು ಸಲಹೆ ನೀಡಿದ್ದಾರೆ. ಇನ್ನೂ, ಕೊಪ್ಪಳ ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್ ಈ ಕ್ಷೇತ್ರವಾಗಿದ್ದು, ಇದೂ ಕೂಡ ಸಿದ್ದರಾಮಯ್ಯರಿಗೆ ಸೇಫ್ ಆಗಿದೆ. ಇಲ್ಲೂ ಕೂಡ ಸಿದ್ದರಾಮಯ್ಯ ಸ್ಪರ್ಧಿಸಬಹುದು ಎಂದು ಆಪ್ತರು ಸಲಹೆ ನೀಡಿದ್ದಾರೆ. ಈ ಐದು ಕ್ಷೇತ್ರಗಳ ಪೈಕಿ ಸಿದ್ದರಾಮಯ್ಯ ಯಾವುದನ್ನು ಆಯ್ಕೆ ಮಾಡುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.
BJPಗೆ ಸಚಿವ ವಿ.ಸೋಮಣ್ಣ ಗುಡ್ ಬೈ: ಮಾ.27ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ?
ಬೆಂಗಳೂರು: ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಮತ್ತೊಂದೆಡೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುವವ ಸಂಖ್ಯೆಯೂ ಹೆಚ್ಚಾಗಿದೆ. ಇದೇ ವೇಳೆ ಸಚಿವ ವಿ.ಸೋಮಣ್ಣ ( Minister V Somanna ) ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಎನ್ನಲಾಗುತ್ತಿದೆ. ಮಾರ್ಚ್ 27ರಂದು ಕಾಂಗ್ರೆಸ್ ಪಕ್ಷವನ್ನು ( Congress Party ) ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆ ಸುದ್ದಿ ವೈರಲ್ ಆಗಿತ್ತು. ಸುದ್ದಿ ವೈರಲ್ ಆಗುತ್ತಿದ್ದಂತೇ ಅವರು ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಸ್ ಮನೋಹರ್ ರಾಜೀನಾಮೆ ನೀಡಿದ್ದರು.ಈಗ ಮತ್ತೆ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುವಂತ ಸುದ್ದಿ ವೈರಲ್ ಆಗಿದೆ. ಅಲ್ಲದೇ ಅವರು ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಪಕ್ಷವನ್ನು ಇದೇ ಮಾರ್ಚ್ 27, 2023ರಂದು ಸೇರಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.