ನೀವು ಓಡಾಡುವ ಬೆಂಗಳೂರಿನ ರಸ್ತೆಗಳು ಸರಿಯಿಲ್ಲವೇ? ಈ ಆಯಪ್‌ನಲ್ಲಿ ದೂರು ನೀಡಿ, ಪರಿಹಾರ ಪಡೆಯಿರಿ

ಬೆಂಗಳೂರು, ಜನವರಿ 19: ನೀವು ಓಡಾಡುವ ರಸ್ತೆಗಳು ಸರಿ ಇಲ್ಲವೇ? ಹಾಗಾದರೆ, ಬಿಬಿಎಂಪಿ ನಿಮಗೊಂದು ಆಯಪ್ ಸಿದ್ದಪಡಿಸಿದೆ. ಈ ಆಯಪ್‌ನ ಹೆಸರು 'Fix My Street'. ಇದು ಗೂಗಲ್ ಪ್ಲೆಸ್ಟೋರ್‌ನಲ್ಲಿ ಲಭ್ಯವಿದೆ. ಈ ಆಯಪ್ ಶುರುವಾಗಿ ಈಗ 15 ದಿನಗಳಾಯಿತು.
ಫಿಕ್ಸ್ ಮೈ ಸ್ಟ್ರೀಟ್' ಅಪ್ಲಿಕೇಶನ್ 15 ದಿನಗಳಲ್ಲಿ ಸುಮಾರು 2.5 ಸಾವಿರ ದೂರುಗಳನ್ನು ಪಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು 'ಡೆಕ್ಕನ್ ಹೆರಾಲ್ಡ್'ಗೆ ಮಾಹಿತಿ ನೀಡಿದ್ದಾರೆ.
ನಗರದಾದ್ಯಂತ ರಸ್ತೆ ಗುಂಡಿಗಳ ಕುರಿತು ವರದಿ ಮಾಡಲು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾದ 'ಫಿಕ್ಸ್ ಮೈ ಸ್ಟ್ರೀಟ್' ಅಪ್ಲಿಕೇಶನ್ ಕೇವಲ 15 ದಿನಗಳಲ್ಲಿ 2,500 ದೂರುಗಳನ್ನು ಸ್ವೀಕರಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಪ್ರಕಾರ, ಸಾರ್ವಜನಿಕರಿಂದ ಬಂದ 2,500 ದೂರುಗಳಲ್ಲಿ 1,500 ಪರಿಹರಿಸಲಾಗಿದೆ. 'ಕೆಲವು ಪುನರಾವರ್ತಿತ ದೂರುಗಳಿವೆ. ನಾವು ಅವುಗಳನ್ನು ಫಿಲ್ಟರ್ ಮಾಡಬೇಕಿದೆ. ಸದ್ಯಕ್ಕೆ 815 ದೂರುಗಳನ್ನು ಮಾತ್ರ ಸರಿಪಡಿಸಬೇಕಿದೆ' ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಮೇ 2022 ರಿಂದ, ಈ ಅಪ್ಲಿಕೇಶನ್‌ನಲ್ಲಿ ಒಟ್ಟು 40,000 ರಸ್ತೆ ಗುಂಡಿಗಳ ಬಗ್ಗೆ ವರದಿಯಾಗಿವೆ.
ಆಯಪ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ದೂರುಗಳನ್ನು ನೀಡುತ್ತಿರುವ ನಾಗರಿಕರು ಆಯಪ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು ತಿಳಿಸಿದ್ದಾರೆ.