ಇಂದು ಸಿಡಬ್ಲ್ಯುಸಿ ಚುನಾವಣೆ ನಡೆಸುವ ಕುರಿತ ಸಭೆಗೆ ಗಾಂಧಿಗಳು ಹಾಜಾರಾಗೋದು ಡೌಟ್?

ನವದೆಹಲಿ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ಇಂದು ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಅಧಿವೇಶನ ಆರಂಭವಾಗಲಿದ್ದು, ಪಕ್ಷದ ಸಂಚಾಲಕ ಸಮಿತಿ ಸಭೆಯಲ್ಲಿ ಸಿಡಬ್ಲ್ಯುಸಿ(ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಚುನಾವಣೆ ನಡೆಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು.
ಇಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯ ಸಭೆಗೆ ಗಾಂಧಿ(ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ)ಗಳು ಹಾಜರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಉನ್ನತ, ನಿರ್ಣಾಯಕ ಸಂಸ್ಥೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆಗಳು ನಡೆಯಬೇಕೇ ಎಂಬುದರ ಕುರಿತು ಸಭೆ ನಿರ್ಧರಿಸುತ್ತದೆ