ಇಂದು ಕೊರೊನಾ ಕಡಿವಾಣಕ್ಕೆ ಸಭೆ ಹಿನ್ನೆಲೆ : ಸದ್ಯಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ: ಆರ್ .ಆಶೋಕ್ ಸ್ವಷ್ಟನೆ

ಬೆಳಗಾವಿ : ಇಂದು ಕೊರೊನಾ ಕಡಿವಾಣಕ್ಕೆ ಸಭೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಸಭೆ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ' ಎಂದು ಸಚಿವ ಆರ್ ಆಶೋಕ್ ಸ್ವಷ್ಟನೆ ನೀಡಿದ್ದಾರೆಸುದ್ದಿಗಾರರೊಂದಿಗೆ ಸಚಿವ ಆರ್ ಆಶೋಕ್ ಮಾತನಾಡಿ, ದೇಶದಲ್ಲಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಸಭೆ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಯಾರೂ ಕೂಡಾ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಕೊರೊನಾವನ್ನುಸಾರ್ವಜನಿಕರು ಮಾಸ್ಕ್ ಸ್ಯಾನಿಟೈಜರ್ ಬಳಸುವ ಮೂಲಕ ತಡೆಗಟ್ಟಬಹುದು. ಜನ ಸಹಕಾರ ನೀಡಿದ್ರೆ ಕೊರೊನಾವನ್ನು ತಡೆಯಬಹುದು. ಸದ್ಯಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ