ಆದಿವಾಸಿ ಆರೋಗ್ಯ ಕಾರ್ಯಕರ್ತೆ, ಆರೋಗ್ಯ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
ಮಡಿಕೇರಿ : ತಾಲ್ಲೂಕು ಮಟ್ಟದಲ್ಲಿ ಆದಿವಾಸಿ ಆರೋಗ್ಯ ಕಾರ್ಯಕರ್ತೆ ಹಾಗೂ ಜಿಲ್ಲಾ ಮಟ್ಟದಲ್ಲಿ ಆದಿವಾಸಿ ಆರೋಗ್ಯ ಸಂಯೋಜಕರನ್ನು ನೇಮಕ ಮಾಡಲು ನರ್ಸಿಂಗ್ ತರಬೇತಿ ಪಡೆದ ಅರ್ಹ ಬುಡಕಟ್ಟು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
2019-20ನೇ ಸಾಲಿನ ಭಾರತ ಸಂವಿಧಾನ ಅನುಚ್ಚೇಧ 275(1)ರಡಿ ಇಂಪ್ರೂವಿಂಗ್ ಹೆಲ್ತ್ಕೇರ್ ಆಕ್ಸೆಸ್ ಅಮಾಂಗ್ ಅಡ್ವೈಸಿ ಪಾಪ್ಯೂಲೇಷನ್ಸ್ (Improving healthcare access among Adivasi populations) ಕಾರ್ಯಕ್ರಮದ ಅಂಗವಾದ ಟ್ರೈಬಲ್ ಹೆಲ್ತ್ ನ್ಯಾವಿಗೇಷನ್ ಮಾಡೆಲ್ (Tribal Health Navigation Model) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿಗೆ ಒಬ್ಬರಂತೆ ಆದಿವಾಸಿ ಆರೋಗ್ಯ ಕಾರ್ಯಕರ್ತೆ ಹಾಗೂ ಒಬ್ಬ ಜಿಲ್ಲಾ ಮಟ್ಟದ ಆದಿವಾಸಿ ಆರೋಗ್ಯ ಸಂಯೋಜಕ ಹುದ್ದೆಗೆ ಕಂಪ್ಯೂಟರ್ ಜ್ಞಾನವುಳ್ಳ 21 ರಿಂದ 40 ವರ್ಷ ವಯೋಮಿತಿ ಒಳಗಿರುವ ಜೇನು ಕುರುಬ, ಕಾಡು ಕುರುಬ, ಸೋಲಿಗ, ಯರವ, ಕೊರಗ, ಪಣಿಯ, ಮುಂತಾದ ಅರಣ್ಯಾದಾರಿತ ಆದಿವಾಸಿ ಸಮುದಾಯದವರಿಂದ ಅರ್ಜಿ ಆಹ್ವಾನಿಸಲಾಗಿದೆ.(ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ) ಈ ನೇಮಕವು 3 ವರ್ಷಗಳವರೆಗೆ ತಾತ್ಕಾಲಿಕವಾಗಿದ್ದು ಸರ್ಕಾರದ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತದೆ.
ಆದಿವಾಸಿ ಆರೋಗ್ಯ ಕಾರ್ಯಕರ್ತೆ ಹುದ್ದೆ ವಿರಾಜಪೇಟೆಯಲ್ಲಿ 1 ಹುದ್ದೆ ಹಾಗೂ ಸೋಮವಾರಪೇಟೆಯಲ್ಲಿ 1 ಹುದ್ದೆ ಮಾಸಿಕ ವೇತನ 12 ಸಾವಿರ ಆಗಿರುತ್ತದೆ. ಆದಿವಾಸಿ ಆರೋಗ್ಯ ಸಂಯೋಜಕರು ಕೊಡಗು ಜಿಲ್ಲೆಯಲ್ಲಿ 1 ಹುದ್ದೆ ಇದ್ದು ತಿಂಗಳಿಗೆ 15 ಸಾವಿರ ವೇತನವಿರುತ್ತದೆ.
ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆರೋಗ್ಯ/ಸಮಾಜ ಸೇವೆ ವಿಷಯದಲ್ಲಿ ಪದವಿ ಇದ್ದರೆ ಹೆಚ್ಚಿನ ಮಾನ್ಯತೆ, ಆರೋಗ್ಯ ವಿಷಯದಲ್ಲಿ ಯಾವುದೇ ಸಂಘ ಸಂಸ್ಥೆಗಳಲ್ಲಿ ಅಥವಾ ಸರ್ಕಾರದ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದವರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು. ಆರೋಗ್ಯ ಸೇವೆಗಳಿಗೆ ಸಂಭಂಧಿಸಿದಂತೆ ಡಿಪ್ಲೊಮೋ ಪಡೆದಿರುವವರು ಸಹ ಈ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ.
ತಾಲ್ಲೂಕು ಆದಿವಾಸಿ ಆರೊಗ್ಯ ಕಾರ್ಯಕರ್ತೆ ಹುದ್ದೆಗೆ ಆರೋಗ್ಯ ಸೇವೆಗಳಿಗೆ ಸಂಭಂಧಿಸಿದಂತೆ ಡಿಪ್ಲೊಮೋ ಇನ್ Auxiliary Nurse Midwifery (ANM) and general nursing and Midwifery ( GNM ) ಪಡೆದಿರಬೇಕು.ಆರೋಗ್ಯ/ ಸಮಾಜ ಸೇವೆ ವಿಷಯದಲ್ಲಿ ಪದವಿ ಇದ್ದರೆ ಹೆಚ್ಚಿನ ಮಾನ್ಯತೆ. ಆರೋಗ್ಯ ವಿಷಯದಲ್ಲಿ ಯಾವುದೇ ಸಂಘ ಸಂಸ್ಥೆಗಳಲ್ಲಿ ಅಥವಾ ಸರ್ಕಾರದ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದವರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು. ಅಭ್ಯರ್ಥಿಯು ಸ್ಥಳೀಯರಾಗಿರಬೇಕು ಅಥವಾ ನಿರ್ದಿಷ್ಟ ತಾಲ್ಲೂಕು ವ್ಯಾಪ್ತಿಯಲ್ಲಿ ವಾಸವಿರಬೇಕು. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ ಅವರ ಕಚೇರಿಯಿಂದ ಪಡೆದು ಮಾರ್ಚ್, 13 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ ದೂ.ಸಂ.08272-200500 ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.