ಅಮೆಜಾನ್ ಇಂಡಿಯಾ ಕಂಪೆನಿಯಲ್ಲಿ ರಾಜೀನಾಮೆ; ಕೇಂದ್ರದಿಂದ ವಿಚಾರಣೆ

ನವದೆಹಲಿ: ಅಮೆಜಾನ್ ಇಂಡಿಯಾವು ತನ್ನ ಆಹಾರ ವಿಭಾಗದ ಸೇವೆಯನ್ನು ದೇಶದಲ್ಲಿ ಮುಚ್ಚಲು ನಿರ್ಧರಿಸಿದೆ. ಆಹಾರ ವಿಭಾಗ ಸೇರಿದಂತೆ 10 ಸಾವಿರ ಮಂದಿಯನ್ನು ವಜಾಗೊಳಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಮೆಜಾನ್ ಕಂಪನಿಯಲ್ಲಿ ಸಾಲು ಸಾಲು ರಾಜೀನಾಮೆ ನೀಡುತ್ತಿದ್ದು, ಕಾರ್ಮಿಕ ಕಾನೂನು ಅಥವಾ ಸೇವಾ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ತಿಳಿಯಲು ವಿಚಾರಣೆ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.