ರೋಡ್ ರೋಮಿಯೋಗೆ ಕರಾಟೆ ಪಂಚ್ ಕೊಟ್ಟ ಪತ್ರಕರ್ತೆ..!
ಹುಬ್ಬಳ್ಳಿ
ಕೆಲಸಕ್ಕೆ ತೆರಳುತ್ತಿದ್ದ ಪತ್ರಕರ್ತೆಗೆ ರಸ್ತೆಯಲ್ಲಿ ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ ರೋಡ್ ರೋಮಿಯೋಗೆ ಸ್ಥಳೀಯರು ಸೇರಿದಂತೆ ಪತ್ರಕರ್ತೆಯೂ ಬಿಸಿ ಬಿಸಿ ಕಜ್ಜಾಯ ನೀಡಿ ಪೆÇಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತೆ ನಿನ್ನೆ ಸಂಜೆ ಕೆಲಸಕ್ಕೆ ತೆರಳುವ ವೇಳೆ ಕಿಮ್ಸ್ ಆಸ್ಪತ್ರೆಯ ಜನನಿಬಿಡ ಪ್ರದೇಶದ ಬಳಿ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಪೆÇಲೀಸರು ಹಾಗೂ ಕಚೇರಿಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ ಪತ್ರಕರ್ತೆ ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ರೋಡ್ ರೋಮಿಯೋಗೆ ಪತ್ರಕರ್ತೆಯು ಕರಾಟೆ ಪಂಚ್ ನೀಡಿರುವುದಾಗಿ ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಈತ ಜಾರ್ಖಂಡ್ ಮೂಲದವನೆಂದು ಗುರುತಿಸಲಾಗಿದೆ.