PSI ಅಕ್ರಮ ನೇಮಕಾತಿ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು. ಸ್ಪೋಟಕ ಹೇಳಿಕೆ ನೀಡಿದ PSI ಕಿಂಗ್​ಪಿನ್​ R.D.ಪಾಟೀಲ್.!

PSI ಅಕ್ರಮ ನೇಮಕಾತಿ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು. ಸ್ಪೋಟಕ ಹೇಳಿಕೆ ನೀಡಿದ PSI ಕಿಂಗ್​ಪಿನ್​ R.D.ಪಾಟೀಲ್.!

ಬೆಂಗಳೂರು : ರಾಜ್ಯದಲ್ಲಿ PSI ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆ ವೇಳೆ PSI ಕಿಂಗ್​ಪಿನ್ PSI ಅಕ್ರಮ ನೇಮಕಾತಿ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಕಿಂಗ್​ಪಿನ್​ RD ಪಾಟೀಲ್​

RD ಪಾಟೀಲ್ ಮೂಲತ ಕಲಬುರಗಿಯ ಅಫ್ಜಲ್‌ಪುರ ನಿವಾಸಿಯಾಗಿದ್ದಾರೆ.

CID ಅಧಿಕಾರಿಗಳ ವಿಚಾರಣೆ ವೇಳೆ 2016ರಿಂದೀಚೆಗೆ PSI ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ. 2016, 2017, 2018ರ ಬ್ಯಾಚ್‌ನಲ್ಲೂ ಅಕ್ರಮ ಎಸಗಿದ್ದು, 2016, 2017ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

CID ಅಧಿಕಾರಿಗಳು RD ಪಾಟೀಲ್ ಬಾಯ್ಬಿಟ್ಟ ಸತ್ಯ ಕೇಳಿ ಬೆಚ್ಚಿಬಿದಿದ್ದಾರೆ. ಪ್ರತಿ ಬ್ಯಾಚ್‌ನಲ್ಲೂ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿದ್ದರು. ಅಂದಾಜು 30-40 ಅಭ್ಯರ್ಥಿಗಳು ಅಕ್ರಮವಾಗಿ ನೇಮಕವಾಗಿದ್ದಾರೆ. ಹೀಗೆ ನೇಮಕವಾದವರು ಇಂದು PSIಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಹೇಳಿದ್ದಾರೆ.