6 ನೇ ದಿನಕ್ಕೆ ಕಾಲಿಟ್ಟ ʻಅಮೃತಪಾಲ್ ಸಿಂಗ್ʼ ಹುಡುಕಾಟ; ಪೊಲೀಸರಿಂದ ಸ್ಪೋಟಕ ಮಾಹಿತಿ ಬಹಿರಂಗ

ಜಲಂಧರ್: ಪರಾರಿಯಾಗಿರುವ ಅಮೃತಪಾಲ್ ಸಿಂಗ್ ಹುಡುಕಾಟವು 6 ನೇ ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ, ಪೊಲೀಸರಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನದಿಂದ ಪಾರಾಗಲು 12 ಗಂಟೆಗಳಲ್ಲಿ ಐದು ವಾಹನಗಳನ್ನು ಬದಲಾಯಿಸಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಅಮೃತಪಾಲ್ ಸಿಂಗ್‌ನನ್ನು ಬಂಧಿಸಲು ಪಂಜಾಬ್ ಪೊಲೀಸರು ಬೃಹತ್ ಕಾರ್ಯಾಚರಣೆಯನ್ನು ನಡೆಸುತ್ತಲೇ ಇದ್ದು, ಆತನ ಸಹಚರರನ್ನು ಬಂಧಿಸುತ್ತಿದ್ದಾರೆ. ಇಲ್ಲಿಯವರೆಗೂ 154 ಜನರನ್ನು ಬಂಧಿಸಲಾಗಿದೆ. ಇದೇ ವೇಳೆ ಅವರಿಂದ 12 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ರೈಫಲ್‌ಗಳೂ ಸೇರಿವೆ.
ಇದೀಗ ಅಮೃತಪಾಲ್ ಸಿಂಗ್ ಬೈಕ್ ನಲ್ಲಿ ಪರಾರಿಯಾಗಿದ್ದ ವಾಹನವೂ ಪತ್ತೆಯಾಗಿದೆ. ಜಲಂಧರ್ ಎಸ್ ಎಸ್ ಪಿ ಸ್ವರ್ಣದೀಪ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಅಮೃತಪಾಲ್ ಸಿಂಗ್ ಪರಾರಿಯಾಗಿದ್ದ ಬ್ರೆಝಾ ಕಾರನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಅಮೃತಪಾಲ್ ಸಿಂಗ್ ಪರಾರಿಯಾಗಲು ಸಹಾಯ ಮಾಡಿದ ನಾಲ್ವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.