ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ; ಖಾತೆಗೆ ಬರಲಿದೆ ಭಾರೀ ಮೊತ್ತ

ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ; ಖಾತೆಗೆ ಬರಲಿದೆ ಭಾರೀ ಮೊತ್ತ

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕಾದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲನೆಯದು ಜನವರಿಯಲ್ಲಿ ಮತ್ತು ಎರಡನೆಯದು ಜುಲೈನಲ್ಲಿ.

ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022ರವರೆಗೆ ವಿಸ್ತರಿಸಲಾಗಿದೆ.

ಈಗ ಮುಂದಿನ ಅಂದರೆ ಜನವರಿ ಡಿಎ ಹೆಚ್ಚಳವು ಮಾರ್ಚ್ 2023ರಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಇದರ ಲಾಭ ಜನವರಿಯಿಂದ್ಲೇ ನೌಕರರಿಗೆ ಲಭ್ಯವಾಗುತ್ತದೆ. ಡಿಎ ಜೊತೆಗೆ ಪಿಂಚಣಿದಾರರ ಡಿಆರ್ ಕೂಡ ಹೆಚ್ಚಾಗಲಿದೆ. ಜನವರಿ 1ರಿಂದ ಅನ್ವಯವಾಗಲಿರುವ ಈ ತುಟ್ಟಿಭತ್ಯೆಯನ್ನು ಮಾರ್ಚ್‌ನಲ್ಲಿ ಬಾಕಿ ಹಣದೊಂದಿಗೆ ನೌಕರರಿಗೆ ನೀಡಲಾಗುವುದು. ಮೂಲಗಳ ಪ್ರಕಾರ ಸರ್ಕಾರ ಪಿಂಚಣಿದಾರರ ಡಿಆರ್ ಅನ್ನು ಸಹ ಹೆಚ್ಚಿಸಲಿದೆ.

18 ತಿಂಗಳ ಡಿಎ ಬಾಕಿ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಸರ್ಕಾರ ಇದನ್ನು ನಿರಾಕರಿಸಿದೆ. ಕಳೆದ ಬಾರಿ ಸೆಪ್ಟೆಂಬರ್‌ನಲ್ಲಿ 48 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರು ಡಿಎ ಹೆಚ್ಚಳದ ಪ್ರಯೋಜನ ಪಡೆದಿದ್ದರು. ಪ್ರಸ್ತುತ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.38ರಷ್ಟಿದೆ. ಜನವರಿಯಲ್ಲಿ ಶೇ.4ರಷ್ಟು ಹೆಚ್ಚಳದೊಂದಿಗೆ ಶೇ.42ರಷ್ಟಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸರ್ಕಾರ ಶೇ.3ರಷ್ಟು ಡಿಎ ಹೆಚ್ಚಿಸಿತ್ತು.