'ಹೊರಗೆ ಹೋಗಿ ಮಾತನಾಡಿ': ಭಾಷಣದ ಮಧ್ಯೆ ಸಚಿವ ಬಿ.ಸಿ ನಾಗೇಶ್ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗವೊಂದು ನಡೆದಿದೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಒಳನಾಡು ಮೀನುಗಾರಿಕೆ ಉತ್ಪಾದಕರ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದಾಗ ವೇದಿಕೆಯ ಮೇಲೆ ಕುಳಿತಿದ್ದ ಸಚಿವ ನಾಗೇಶ್, ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಜತೆ ಜೋರಾಗಿ ಮಾತನಾಡುತ್ತಿದ್ದರು.
''ನಾಗೇಶ್ ನಿಮಗೆ ಮಾತನಾಡಬೇಕೆಂದರೆ ಹೊರಗೆ ಹೋಗಿ ಮಾತನಾಡಿ. ವೇದಿಕೆಯ ಮೇಲೆ ಮಾತನಾಡಬೇಡಿ. ಇದರಿಂದ, ಭಾಷಣಕ್ಕೆ ತೊಂದರೆಯಾಗುತ್ತದೆ. ಐದೇ ನಿಮಿಷದಲ್ಲಿ ಭಾಷಣ ಮುಗಿಸುತ್ತೇನೆ'' ಎಂದು ಹೇಳಿದ್ದಾರೆ. ಆಗ ಸಚಿವ ನಾಗೇಶ್ ಪಕ್ಕದಲ್ಲಿರುವವರ ಜತೆ ಮಾತನಾಡುವುದನ್ನು ನಿಲ್ಲಿಸಿ ಸುಮ್ಮನೆ ಕುಳಿತರು.