ಹೆಚ್ಡಿಕೆ ಕುಟುಂಬದವರು ಯಾರನ್ನೂ ಬೆಳೆಯೋಕೆ ಬಿಡಲ್ಲʼ : ಸಚಿವ ನಾರಾಯಣ ಗೌಡ ಆಕ್ರೋಶ
ಬೆಂಗಳೂರು : ʻಹೆಚ್ಡಿಕೆ ಕುಟುಂಬದವರು ಯಾರನ್ನೂ ಬೆಳೆಯೋಕೆ ಬಿಡಲ್ಲʼ ಎಂದು ಕುಮಾರಸ್ವಾಮಿ ವಿರುದ್ಧ ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಆರ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ಮಾತನಾಡಿ, 'ಹೆಚ್ಡಿಕೆ ಕುಟುಂಬದವರು ಯಾರನ್ನೂ ಬೆಳೆಯೋಕೆ ಬಿಡಲ್ಲ'.
ಬೆಳೆಯೋದಕ್ಕೆ ಬಿಟ್ಟಿದ್ರೆ ನಾವೆಲ್ಲ ಜೆಡಿಎಸ್ ಪಕ್ಷವನ್ನು ಬಿಡುತ್ತಿದ್ದೇವಾ? ಅದರಲ್ಲೂ ಜೆಡಿಎಸ್ ಪಕ್ಷದಲ್ಲಿದ್ದ ಎಚ್. ವಿಶ್ವನಾಥ್, ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮೀ, ವೈ.ಎಸ್ವಿ ದತ್ತಾ, ನಾನು ಎಲ್ಲಾ ಯಾಕೆ ಪಕ್ಷ ಬಿಡ್ತಿದ್ವಿ? ಪಕ್ಷದಲ್ಲಿ ಬೆಳೆಯೋ ನಾಯಕರಿಗೆ ಟಾರ್ಗೆಟ್ ಮಾಡ್ತಾರೆ. ಟಾರ್ಗೆಟ್ ಮಾಡಿದ್ರೆ ಮಾಡಿದ್ರೆ ನಾವು ಎಷ್ಟು ದಿನ ಅಂತಾ ಕಾಯೋದಕ್ಕೆ ಆಗುತ್ತದೆ. ಕೆಆರ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.