ಹುಂಡಿ ಎಣಿಕೆಯ ವೇಳೆ ಸಿಕ್ತು ಹೀಗೊಂದು ಪತ್ರ..!

ಚಾಮರಾಜನಗರ: ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ ನೋಟ್ಬುಕ್ ಹಾಳೆಯಲ್ಲಿ ಬರೆದ ಪತ್ರವೊಂದು ದೊರೆತಿದೆ. ಪತ್ರದಲ್ಲಿ ಓಂ ನಮಃ ಶಿವಾಯ, ನನಗೆ ಹುಡುಗಿಯನ್ನು ಕರುಣಿಸು ಎಂದು ಎರಡು ಸಾಲು ಬರೆಯಲಾಗಿದೆ. ಸರಿಯಾದ ಓದು ಬರಹ ಬಾರದ ವ್ಯಕ್ತಿ ಬರೆದಂತಿದ್ದು, ತಪ್ಪು ತಪ್ಪಾಗಿ ಬರೆಯಲಾಗಿದೆ. ಚಾಮರಾಜೇಶ್ವರ ಸ್ವಾಮಿ ಹುಂಡಿ ಎಣಿಕೆ 1 ವರ್ಷದ ಬಳಿಕ ನಡೆದಿದ್ದು, ಒಟ್ಟು 7,61,870 ರೂ ಸಂಗ್ರಹವಾಗಿದೆ.