ಹೀಗಿದೆ ನಿನ್ನೆ 'ಸಿಎಂ ಬೊಮ್ಮಾಯಿ' ನೇತೃತ್ವದಲ್ಲಿ ನಡೆದ 'ಸಚಿವ ಸಂಪುಟ ಸಭೆ'ಯ ಹೈಲೈಟ್ಸ್

ಹೀಗಿದೆ ನಿನ್ನೆ 'ಸಿಎಂ ಬೊಮ್ಮಾಯಿ' ನೇತೃತ್ವದಲ್ಲಿ ನಡೆದ 'ಸಚಿವ ಸಂಪುಟ ಸಭೆ'ಯ ಹೈಲೈಟ್ಸ್

ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ( SC, ST Reservation Hike ) ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಸೇರಿದಂತೆ ಹಲವು ನಿರ್ಣಯಗಳಿಗೆ ಅಂಗೀಕಾರ ದೊರೆತಿದೆ.

ಆ ಹೈಲೈಟ್ಸ್ ಮುಂದೆ ಓದಿ.

ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ, ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ ಕೃಷಿ ಸಂಶೋಧನಾ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ. ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಜ್ಯುಲೆಷನ್ ಉಪಗ್ರಹ ದತ್ತಾಂಶ ಖರೀದಿಗೆ 18 ಕೋಟಿ ಅನುಮೋದನೆ ಕೊಡುತ್ತಿದ್ದೇವೆ. ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ನೀತಿ 2022 ರಿಂದ 27ಕ್ಕೆ ತಿದ್ದುಪಡಿ ಮಾಡಿದ್ದೇವೆ ಎಂದರು.

ದಾವಣಗೆರೆ ಹೊನ್ನಾಳಿಯಲ್ಲಿ 100 ರಿಂದ200 ಬೆಡ್ ಆಸ್ಪತ್ರೆಗೆ 23 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಗೋವಿಂದರಾಜ ನಗರ ಕ್ಷೇತ್ರದ ಹೈಟೇಕ್ ಆಸ್ಪತ್ರೆಗೆ 24 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರ ಹಾಗೂ ನೆಲಮಂಗಲ ರೋಡ್ ನವೀಕರಣಕ್ಕೆ 8 ಕೋಟಿ ಇದ್ದ 10 ಕೋಟಿ 13 ಲಕ್ಷ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.

ಸೊರಬ ತಾಲ್ಲೂಕಿನಲ್ಲಿ ಇಡೀ ಸರ್ಕಾರಿ ಕಚೇರಿಗಳನ್ನ ಒಂದೇ ಕಡೆ ಪ್ರಾರಾಂಭಿಸಲು 49.60 ಕೋಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ. ವಿಜಯಪುರ ಜಿಲ್ಲೆಯಸಿದ್ದಾರೂಡ ಮಠಕ್ಕೆ 5 ಎಕರೆ ಜಮೀನು ಮಂಜೂರು. ನಿರ್ಮಾಲಾ ಚಾರಿಟಬಲ್ ಟ್ರಸ್ಟ್ ಗೆ ಎರಡು ಎಕರೆ ಜಮೀನು ಮಂಜೂರು. ಹಿರೇಕೆರೂರಿನ ಹಬಲೂರು ಮಾಸುರುಗಳಲ್ಲಿ ಸರ್ವಜ್ಞ ಭವನ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ಜಲಜೀವನ್ ಮಿಷನ್ ಅಡಿ 26 ಕೋಟಿ ಅನುದಾನ, ಕೇಂದ್ರದಿಂದ 11.50 ಕೋಟಿ ರಾಜ್ಯದಿಂದ 14.50 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.

30 ಐಟಿಐ ಮೇಲ್ದರ್ಜೆಗೆ ಎರಿಸಲು ಟಾಟಾ ಟೆಕ್ನಾಲಜಿ ಸಹಯೋಗ (ಒಟ್ಟು 927 ಕೋಟಿ) ಅದರಲ್ಲಿ ರಾಜ್ಯ ಸರ್ಕಾರದ ಪಾಲು 131 ಕೋಟಿ ಅನುದಾನ ನೀಡಲಾಗುತ್ತಿದೆ. ಶಿಗ್ಗಾಂವ್ ನ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಕ್ಕೆ 73.75 ಕೋಟಿ ಅನುದಾನ ಒದಗಿಸಲಾಗುತ್ತದೆ. ಹಾವೇರಿಯ ನೆಲಗೊಳ ಗ್ರಾಮದಲ್ಲಿ ಬಹು ಕೌಶಲ್ಯ ತರಬೇತಿ ಕೇಂದ್ರ, ಬಾಲಕರ ವಿದ್ಯಾರ್ಥಿ ನಿಲಯಕ್ಕೆ 37.55 ಕೋಟಿ ಅನುದಾನಕ್ಕೆ ಸಂಪುಟ ನಿರ್ಣಯಿಸಿದೆ ಎಂದರು.

ವಿದ್ಯುತ್ ಸರಬರಾಜು ಕೇಂದ್ರಗಳಿಗೆ 13 ಸಾವಿರ ಕೋಟಿ ಸಾಲ ಅನುಮೋದನೆ ನೀಡಲಾಗಿದೆ. ಮಡಿಕೇರಿಯಲ್ಲಿ ಎಸ್ಪಿ ಕಚೇರಿ ನಿರ್ಮಾಣಕ್ಕೆ 12 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ಪಿಪಿಪಿ ಮಾಡೆಲ್ ನಲ್ಲಿ ಬಸ್ ನಿಲ್ದಾಣ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೆಪಿಎಸ್ ಸಿ ಯಲ್ಲಿ ಖಾಲಿಯಿರುವ ಸ್ಥಾನಕ್ಕೆ ಭರ್ತಿ ಮಾಡೋಕೆ ಸಿಎಂಗೆ ಅಧಿಕಾರ ನೀಡಲಾಗಿದೆ. ಬಿಎಸ್ಸಿ ಸಭೆ ಕರೆದು ಅಧಿವೇಶನ ಅಂತ್ಯ ಮಾಡುವ ಕುರಿತು ತೀರ್ಮಾನ ಮಾಡ್ತೀವಿ ಎಂದು ಹೇಳಿದರು.

ಎಸ್ ಟಿ ಎಸ್ ಸಿ ಮೀಸಲಾತಿ ವಿಚಾರವಾಗಿ ಮಾತನಾಡಿದಂತ ಅವರು, ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಭೆಯಲ್ಲಿ ಸಂಪುಟ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮಿಕಿ ಜಾತ್ರೆಯಲ್ಲಿ ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನವೇ ಸಿಎಂ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಮುಂಬರುವ ಜಂಟಿ ಅಧಿವೇಶನದಲ್ಲಿ ಸರ್ವಾನುಮತದಿಂದ ಶಿಫಾರಸ್ಸಿಗೆ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.