ಹಾವೇರಿಗೆ ಕಿಟೆಲ್ ಕುಟುಂಬಸ್ಥರ ಭೇಟಿ
ಹಾವೇರಿ: ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಕುಟುಂಬಸ್ಥರು ಗುರುವಾರ ಹಾವೇರಿಗೆ ಭೇಟಿ ನೀಡಿ, ಕನ್ನಡದ ಸಂಸ್ಕೃತಿ, ಭಾಷೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕಸಾಪ ರಾಜ್ಯಾಧ್ಯಕ್ಷ್ಯ ಮಹೇಶ ಜೋಷಿ ನೀಡಿದ್ದ ಆಹ್ವಾನದ ಮೇರೆಗೆ ಕಿಟೆಲ್ ಅವರ ಮರಿಮೊಮ್ಮಗಳು ಅಲ್ಮತ್ ಮೆಯೆರ್, ಮರಿಮೊಮ್ಮಗ ಯವೆಸ್ ಪ್ಯಾಟ್ರಿಕ್ ಮೆಯೆರ್, ಸಂಬಂಧಿ ಜಾನ್ ಫೆಡ್ರಿಕ್ ಸ್ಟಾರ್ಮರ್ ನಗರಕ್ಕೆ ಆಗಮಿಸಿದ್ದರು.
ಈ ಹಿಂದೆ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ನ.11ರಿಂದ ಮೂರು ದಿನಗಳ ಕಾಲ ನಡೆಸಲು ನಿರ್ಧಾರವಾಗಿತ್ತು. ಸಮ್ಮೇಳನ ಮುಂದೂಡಿಕೆಯಾದರೂ ಕಿಟೆಲ್ ಕುಟುಂಬಸ್ಥರು ಪೂರ್ವ ನಿಗದಿತ ಪ್ರವಾಸ ರದ್ದು ಮಾಡದೇ ಕನ್ನಡ ನಾಡಿನ ಸೊಬಗು ಸವಿಯಲು ಆಗಮಿಸಿದ್ದರು.
10 ದಿನಗಳ ಕಾಲ ಕರ್ನಾಟಕದಲ್ಲೇ ಇರುತ್ತೇವೆ. ಹುಬ್ಬಳ್ಳಿ, ಧಾರವಾಡದ ಕಿಟೆಲ್ ಕಾಲೇಜು, ಮಂಗಳೂರು, ಬೆಂಗಳೂರಿಗೆ ತೆರಳಿ ಕಿಟೆಲ್ ನಡೆದಾಡಿದ ಸ್ಥಳಗಳನ್ನು ನೋಡಲಿದ್ದೇವೆ. ಜನವರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲೂ ನಾವು ಭಾಗಿಯಾಗಲಿದ್ದೇವೆ ಕಿಟೆಲ್ ಬಂಧುಗಳು ತಿಳಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಕುಟುಂಬ ಭಾಗವಹಿಸಲಿದೆ. ಆ ಮೂಲಕ ನಾವು ಕನ್ನಡ ಭಾಷೆಗೆ ಗೌರವ ಸಲ್ಲಿಸಲಿದ್ದೇವೆ. ನಮ್ಮ ಕುಟುಂಬದ ಹಿರಿಯರಾದ ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರು ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಆ ಗೌರವ ನಮ್ಮ ಕುಟುಂಬಕ್ಕೆ ಮುಂದುವರೆದುಕೊಂಡು ಬಂದ