ಹನೂರು : ಉಚಿತ ಬಸ್ ಪಾಸ್ ವಿತರಣೆ ಸದುಪಯೋಗಕ್ಕೆ ಮನವಿ

ಹನೂರು : ಉಚಿತ ಬಸ್ ಪಾಸ್ ವಿತರಣೆ ಸದುಪಯೋಗಕ್ಕೆ ಮನವಿ

ನೂರು: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ವಿತರಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ಮುತ್ತುರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲ್ಲೂಕು ಕಟ್ಟಡ ಕಾರ್ಮಿಕರಿಗೆ ಇದುವರೆಗೆ ಸಾವಿರಾರು ಉಚಿತ ಪಾಸ್ ಗಳನ್ನು ನೀಡಲಾಗಿದೆ.

ಇನ್ನೂ ಉಚಿತ ಬಸ್ ಪಾಸ್ ಪಡೆಯದಿರುವ ಕಟ್ಟಡ ಕಾರ್ಮಿಕರು ಸರ್ಕಾರದ ವತಿಯಿಂದ ನೀಡುವ ಉಚಿತ ಬಸ್ ಪಾಸ್ ಗಳನ್ನು ಪಡೆದುಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.