ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಟೈಟಲ್ 'ರಾಜೇಂದ್ರ ಸಿಂಗ್ ಬಾಬು' ಬಳಿ ಇಲ್ಲ

ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಟೈಟಲ್ 'ರಾಜೇಂದ್ರ ಸಿಂಗ್ ಬಾಬು' ಬಳಿ ಇಲ್ಲ

ಬೆಂಗಳೂರು : ಮೋಹಕ ತಾರೆ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿದ್ದು, ಈ ಸಿನಿಮಾದ ಶೀರ್ಷಿಕೆ ಬಳಸದಂತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ಆದರೆ ಇದೀಗ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಟೈಟಲ್ 'ರಾಜೇಂದ್ರ ಸಿಂಗ್ ಬಾಬು' ಬಳಿ ಇಲ್ಲ ಎಂಬದು ಗೊತಾಗಿದೆ. ಈಗಾಗಲೇ ರಮ್ಯಾ ಅವರು ಗಂಗಾಧರ್ ಅವರಿಂದ ಪತ್ರದ ಮೂಲಕ ಟೈಟಲ್ ಅನ್ನು ತಮಗೆ ವರ್ಗಾಯಿಸಿಕೊಂಡಿದ್ದಾರಂತೆ. ಗಂಗಾಧರ ಕೊಟ್ಟ ಪತ್ರವನ್ನು ರಮ್ಯಾ ವಾಣಿಜ್ಯ ಮಂಡಳಿಗೆ ಸಲ್ಲಿಸಿದರೆ, ಟೈಟಲ್ ರಮ್ಯಾಗೆ ಸಿಗಲಿದೆ. ಇನ್ನೂ, ಶೀರ್ಷಿಕೆಗೂ ಮತ್ತು ರಾಜೇಂದ್ರ ಸಿಂಗ್ ಬಾಬು ಅವರಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ವತಃ ವಾಣಿಜ್ಯ ಮಂಡಳಿಯೇ ಸ್ಪಷ್ಟಪಡಿಸಿದೆ. ಈ ಮೂಲಕ ಟೈಟಲ್ ವಿವಾದಕ್ಕೆ ತೆರೆ ಬಿದ್ದಿದೆ.

ಬಣ್ಣದ ಗೆಜ್ಜೆ ಸಿನಿಮಾದ ಜನಪ್ರಿಯ ಹಾಡು ಸ್ವಾತಿ ಮುತ್ತಿನ ಮಳೆಹನಿಯೇ' . ಈ ಹಾಡು ಇಂದಿಗೂ ಜನರ ಬಾಯಲ್ಲಿ ಗುನುಗುಟ್ಟುತ್ತಿದೆ. ಅದೇ ಹಾಡಿನ ಸಾಲನ್ನು ಇಟ್ಟುಕೊಮಡು ರಮ್ಮಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಆಗಿ ಇಟ್ಟಿದ್ದರು. ಇದೀಗ ಸ್ವಾತಿ ಮುತ್ತಿನ ಮಳೆಹನಿಯೇ' ಟೈಟಲ್ ಬಳಸದಂತೆ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈಗಾಗಲೇ ನಾನು ಈ ಟೈಟಲ್ ನೊಂದಣಿ ಮಾಡಿಸಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದು, ಟೈಟಲ್ ನ್ನು ಯಾರಿಗೂ ನೀಡಬಾರದು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ತಾಕೀತು ಮಾಡಿದ್ದರು. ರಮ್ಯಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಬಹಳ ಕುತೂಹಲ ಕೆರಳಿಸಿದೆ.