ಸಿದ್ದೇಶ್ವರ ಸ್ವಾಮೀಜಿ ನೆನೆದು ಕಣ್ಣೀರು ಹಾಕಿದ ಮುಸ್ಲಿಂ ದಂಪತಿ

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ(82) ಅಸ್ತಂಗತರಾಗಿದ್ದು, ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಸ್ವಾಮೀಜಿ ಅಂತಿಮ ದರ್ಶನಕ್ಕಾಗಿ ಭಕ್ತರು ಬರುತ್ತಿದ್ದಾರೆ. ಸಿದ್ದೇಶ್ವರಶ್ರೀ ಸರ್ವಧರ್ಮ ಸಂತರಾಗಿದ್ದರು, ಯಾವತ್ತು ಜಾತಿ, ಧರ್ಮದ ಬೇಧ ಮಾಡಲಿಲ್ಲ, ಎಲ್ಲ ಮನುಷ್ಯರು ಒಂದೇ ಎನ್ನುತ್ತಿದ್ದರು. ಈ ಹಿಂದೆ ಸ್ವಾಮೀಜಿ ಪ್ರವಚನಕ್ಕೆ ಹೋಗಿದ್ದೇವು ಎಂದು ಮುಸ್ಲಿಂ ದಂಪತಿಗಳು ಸ್ವಾಮೀಜಿಯನ್ನ ನೆನೆಯುತ್ತಾ ಕಣ್ಣೀರು ಹಾಕುತ್ತಿದ್ದಾರೆ