ಸಿದ್ದೇಶ್ವರ ಶ್ರೀಗಳನ್ನು ನೆನೆದು ಕಣ್ಣೀರಿಟ್ಟ ಮುಸ್ಲಿಂ ಕುಟುಂಬ
ವಿಜಯಪುರ: ನಡೆದಾಡುವ ದೇವರು, ಪ್ರವಚನ ಪಂಡಿತ ಸಿದ್ದೇಶ್ವರ ಸ್ವಾಮಿಜಿ ಅಸ್ತಂಗತರಾಗಿದ್ದು, ಸ್ವಾಮೀಜಿ ಅಂತಿಮ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಆಗಮಿಸುತ್ತಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಸರ್ವಧರ್ಮ ಸಂತರಾಗಿದ್ದು, ಜಾತಿ, ಮತ, ಪಂಥ, ಧರ್ಮ ಬೇಧವಿಲ್ಲದೇ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಸಿದ್ದೇಶ್ವರ ಶ್ರೀ ಅಗಲಿಕೆಗೆ ವಿಜಯಪುರದಲ್ಲಿ ಮುಸ್ಲಿಂ ಕುಟುಂಬ ಕಣ್ಣೀರಿಟ್ಟಿದೆ.
ಸ್ವಾಮೀಜಿಯವರ ಪ್ರವಚನಕ್ಕೆ ನಾವೂ ಹೋಗುತ್ತಿದ್ದೆವು. ಹಲವರ ಸಂಕಷ್ಟಗಳನ್ನು ಸ್ವಾಮೀಜಿ ಪ್ರವಚನದಿಂದಲೇ ಪರಿಹರಿಸಿದ್ದರು. ಭಾವೈಕ್ಯತೆಯನ್ನು ಮೆರೆದಿದ್ದ ಸಂತರು ಎಂದು ಕಂಬನಿ ಮಿಡಿದಿದ್ದಾರೆ. ಅಲ್ಲದೇ ಮನೆಯಲ್ಲಿ ಸ್ವಾಮೀಜಿಗಳ ಭಾವಚಿತ್ರವಿರಿಸಿ ಆರತಿ ಬೆಳಗಿ ಮುಸ್ಲಿಂ ಕುಟುಂಬ ಸಂತಾಪ ಸೂಚಿಸಿದೆ. ಈ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ.