ಸಾಲ, ಸಹಾಯಧನಕ್ಕಾಗಿ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
ಬೆಂಗಳೂರು : ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಉಪಕರಣಗಳು, ಸಾಧನಗಳು ಹಾಗೂ ಕಚ್ಛಾ ವಸ್ತುಗಳನ್ನು ಖರೀದಿಸಲು ಕುಂಬಾರ, ಕಮ್ಮಾರ ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರ ಮತ್ತು ಇತರೆ ಕುಶಲಕರ್ಮಿಗಳಿಂದ ಸಾಲ - ಸಹಾಯಧನ ಸೌಲಭ್ಯಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಕುಶಲಕರ್ಮಿಗಳು ನೀಡಲು ಕರಕುಶಲ ಅಭಿವೃದ್ಧಿ ನಿಗಮ ಹಾಗೂ ಕರಕುಶಲ ಅಭಿವೃದ್ಧಿ ಆಯುಕ್ತರಿಂದ ನೀಡಲಾದ ಕುಶಲಕರ್ಮಿ ಗುರುತಿನ ಚೀಟಿ ಅಥವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರ /ಕೈಗಾರಿಕಾ ವಿಸ್ತರಣಾಧಿಕಾರಿ ರವರಿಂದ ಪಡೆದ ಕುಶಲಕರ್ಮಿಗಳ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿ ಅರ್ಜಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ. ಬೆಂಗಳೂರು ನಗರ ಜಿಲ್ಲೆ. 1ನೇ ಮಹಡಿ, ಜಿಟಿಟಿಸಿ ಹತ್ತಿರ, ಕಾರ್ಡ್ ರಸ್ತೆ. ರಾಜಾಜಿನಗರ ಕೈಗಾರಿಕಾ ವಸಾಹತು, ಬೆಂಗಳೂರು -560010 ಅಥವಾ ದೂರವಾಣಿ ಸಂಖ್ಯೆ 080-23501478 ಅಥವಾ ಉಪ ನಿರ್ದೇಶಕರು (ಖಾಗ್ರಾ) ಎಸ್. ಜೆ. ಪಾಲಿಟೆನಿಕ್ ಆವರಣ. ಕೆ.ಆರ್. ವೃತ್ತ, ಬೆಂಗಳೂರು 560001. ದೂರವಾಣಿ ಸಂಖ್ಯೆ 080-22375765 ಮೂಲಕ ಸಂಪರ್ಕಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.