ಶ್ರದ್ದಾ ಹಂತಕ ಅಫ್ತಾಬ್ ಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ತನ್ನ ಪ್ರಿಯತಮೆ ಶ್ರದ್ದಾ ವಾಲಕರ್ ನ್ನು ಬರ್ಬರವಾಗಿ ಕೊಂದು ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ವಿಕೃತಿ ಮೆರೆದಿದ್ದ ಅಫ್ತಾಬ್ ಪೂನಾವಾಲಾಗೆ ನ.26ರಂದು ಸಾಕೇತ್ ನ್ಯಾಯಾಲಯ 14 ದಿನದ ನ್ಯಾಯಾಂಗ ಬಂಧನ ವಿಸ್ತರಿಸಿತ್ತು. ಇನ್ನ ಆರೋಪಿ ಅಫ್ತಾಬ್ ಪೊಲೀಸರ ದಿಕ್ಕುತಪ್ಪಿಸಿದ್ದಾನೆ ಎಂಬ ಶಂಕೆ ಉಂಟಾಗಿದ್ದು ಅತೃಪ್ತಿಕರ ಉತ್ತರಗಳಿಂದಾಗಿ ಇಂದು ಅಂತಿಮ ಪಾಲಿಗ್ರಾಫ್ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.