ಶಿಗ್ಗಾವಿಯಲ್ಲಿ ಕೇಂದ್ರ ಯೋಜನೆಗಳ ವಿಶೇಷ ಛಾಯಾಚಿತ್ರ ಪದ್ರರ್ಶನ
ಕೇಂದ್ರ ಸರ್ಕಾರದ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶಿಗ್ಗಾವಿಯ ಪುರಸಭೆ ಆವರಣದಲ್ಲಿ ಬುಡಕಟ್ಟು ಗೌರವ ದಿನ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತ 5 ದಿನಗಳ ವಿಶೇಷ ಛಾಯಾಚಿತ್ರ ಪದ್ರರ್ಶನ ಆಯೋಜಿಸಲಾಗಿದೆ.
ಪದ್ರರ್ಶನದ ಎರಡನೇ ದಿನವಾದ ಬುಧವಾರ, ಚೆನ್ನಪ್ಪ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಕನ್ನಡ ನಾಡು-ನುಡಿಯ ಮಹತ್ವ ಸಾರುವ ವಿವಿಧ ಗೀತೆಗಳ ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಬೆಂಗಳೂರಿನ ಸಂಗೀತ ಮತ್ತು ನಾಟಕ ಕಲಾ ತಂಡದವರು ಪೋಷಣೆ ಅಭಿಯಾನ ಕುರಿತಾದ ಜಾಗೃತಿ ಮೂಡಿಸುವ ದೀಪದ ನೃತ್ಯ ನಡೆಸಿಕೊಟ್ಟರು ಹಾಗೂ ಜಾನಪದ ಗಾಯನಕ್ಕೆ ಒನಕೆ ನೃತ್ಯ ಮಾಡಿ ಸಾಮಾಜಿಕ ಕಳಕಳಿಯ ಅರಿವು ಮೂಡಿಸಿದರು.
ಶಿಗ್ಗಾವಿಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಪೌಷ್ಠಿಕಾಂಶವುಳ್ಳ ದಿನನಿತ್ಯದ ಆಹಾರ ಉತ್ಪನ್ನಗಳನ್ನು ಪರಿಚಯಿಸಿ ಕೊಟ್ಟರು.
ಛಾಯಾಚಿತ್ರ ಪದರ್ಶನದ ಮೂರನೇ ದಿನವಾದ ಗುರುವಾರ, ಶಿಕ್ಷಣ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಸಾಂಸೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್. ಟಿ. ಮಾಹಿತಿ ನೀಡಿದ್ದಾರೆ.