ವೀಳ್ಯದೆಲೆಯಲ್ಲಿದೆ ಆರೋಗ್ಯದಾಯಕ ಗುಣಗಳು

ವೀಳ್ಯದೆಲೆಯಲ್ಲಿದೆ ಆರೋಗ್ಯದಾಯಕ ಗುಣಗಳು

ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ ಕಡ್ಡಾಯವಾಗಿ ಇರುತ್ತದೆ.ಹಾಗೆಯೇ ಇದರಲ್ಲಿಆರೋಗ್ಯದಾಯಕ ಗುಣಗಳನ್ನು ಹೊಂದಿದೆ.

ತಂಬಾಕು ರಹಿತ ವಾಗಿರುವಂತಹ ವೀಳ್ಯದೆಲೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಯಿಂದ ಸಿಗುವ ಆರೋಗ್ಯದಾಯಕ ಲಾಭಗಳ ಬಗ್ಗೆ ತಿಳಿಯೋಣ...

ಗಾಯ ಗುಣಮುಖ
ಗಾಯಕ್ಕೆ ಹಚ್ಚುವುದರಿಂದ ಬೇಗನೆ ಒಣಗುವುದು. ಇದು ಕಾಲಜನ್ ಬಿಡುಗಡೆ ಮಾಡಿ ಗಾಯವು ಬೇಗನೆ ಒಣಗುವುದರ ಜೊತೆಗೆ ಹೊಸ ಚರ್ಮ ಬರಲು ಸಹಕಾರಿಸುತ್ತದೆ.

ಕಫ ನಿವಾರಣೆ
ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಸ್ವಲ್ಪ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದರಿಂದ ಕಫ ತೊಂದರೆ ಜೊತೆಗೆ ಉಸಿರಾಟದ ತೊಂದರೆಯು ನಿವಾರಣೆಯಾಗುವುದು .
ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ವೀಳ್ಯದ ಎಲೆಗಳಲ್ಲಿ, ಅಪಾರ ಪ್ರಮಾಣದಲ್ಲಿ ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ, ಮುಖದ ಮೇಲಿರುವ, ಕಲೆಗಳು ಹಾಗೂ ಮೊಡವೆಗಳನ್ನು ಸುಲಭವಾಗಿ ತೆಗೆದುಹಾಕಲು ವೀಳ್ಯದ ಎಲೆ ಬಳಸಲಾಗುತ್ತದೆ.

ವೀಳ್ಯದೆಲೆಯೊಂದಿಗೆ ಕಾಳುಮೆಣಸು, ಒಣ ಶುಂಠಿ ಅರೆದು ಸೇವಿಸಿದರೆ ಕಫ‌ಯುಕ್ತ ಕೆಮ್ಮು , ದಮ್ಮು ಶಮನವಾಗುತ್ತದೆ.

ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ನಿಯಂತ್ರಣಕ್ಕೆ ಬರುತ್ತದೆ.

ಜಗಿಯುವುರಿಂದ ಜೀರ್ಣಕ್ರಿಯೆಯು ಸರಾಗವಾಗುತ್ತದೆ.

ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿವುದರಿಂದ ವಾಕರಿಕೆ ನಿಲ್ಲುತ್ತದೆ.