ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಕಿದಂಬಿ ಶ್ರೀಕಾಂತ್‌ಗೆ ಜಯ

ಹುವೆಲ್ವಾ, ಸ್ಪೇನ್: ಭಾರತದ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾ ಹಣಿಯಲ್ಲಿ ಅವರು 21-12, 21-16ರಿಂದ ಸ್ಪೇನ್‌ನ ಪ್ಯಾಬ್ಲೊ ಅಬಿ ಯನ್ ಅವರನ್ನು ಮಣಿಸಿದರು.
ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ಮನು ಅತ್ರಿ- ಬಿ.ಸುಮೀತ್ ರೆಡ್ಡಿ 16-21, 15-21ರಿಂದ ಡೆನ್ಮಾರ್ಕ್‌ನ ಜೋಯಲ್ ಎಲ್ಪ್ ಮತ್ತು ರಾಸ್ಮಸ್ ಜೇರ್ ಎದುರು ನಿರಾಸೆ ಅನುಭವಿಸಿದರು.
ಇದಕ್ಕೂ ಮೊದಲು ಪೂಜಾ ದಂಡು ಮತ್ತು ಸಂಜನಾ ಸಂತೋಷ್ ಅವರು ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ 12-21ರಿಂದ ನೆದರ್ಲೆಂಡ್ಸ್‌ನ ಅಲಿಸ್ಸಾ ತಿರ್ತೊಸೆಂಟೊನೊ- ಇಮ್ಕೆ ವ್ಯಾನ್ ಡರ್ ಆರ್ ಎದುರು ಹಿನ್ನಡೆಯಲ್ಲಿದ್ದಾಗ ಪಂದ್ಯದಿಂದ ಹಿಂದೆ ಸರಿದರು.