ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ಹೊಸ ರೂಲ್ಸ್‌; ಪಿಜಿ, ಹೋಟೆಲ್‌,ಬೇಕರಿಗಳಿಗೆ ನೋಟಿಸ್‌

ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ಹೊಸ ರೂಲ್ಸ್‌; ಪಿಜಿ, ಹೋಟೆಲ್‌,ಬೇಕರಿಗಳಿಗೆ ನೋಟಿಸ್‌

ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕ್ಷಣಗಣ ಶುರುವಾಗಿದೆ. ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆ.

ಈಗಾಗಲೇ ಖಾಕಿ ಫುಲ್‌ ಅಲರ್ಟ್‌ ಆಗಿದೆ. ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಹೊಸ ರೂಲ್ಸ್‌ ಜಾರಿ ಮಾಡಿದ್ದಾರೆ. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ರೂಲ್ಸ್‌ ಜಾರಿ ಮಾಡಿದೆ. ಪಿಜಿ, ಹೋಟೆಲ್‌ , ಬೇಕರಿ ಸೇರಿ ವಾಣಿಜ್ಯ ಚಟುವಟಿಕೆಗೆ ನೋಟಿಸ್‌ ಜಾರಿ ಮಾಡಿದೆ. ನಿಯ ಪಾಲಿಸುವಂತೆ ಬಿಬಿಎಂಪಿ ಅಧಿಖಾರಿಗಳು ನೋಟಿಸ್‌ ನೀಡಿದ್ದಾರೆ. ಮಧ್ಯರಾತ್ರಿ ಒಂದು ಗಂಟೆ ವರೆಗೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಬಿಬಿಎಂಪಿ ನೋಟಿಸ್‌ ನೀಡಿದೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಲು ನೋಟಿಸ್ ನೀಡಲಾಗಿದೆ. 40 ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ರಸ್ತೆಗಳಲ್ಲಿ ಚಟುವಟಿಕೆಗೆ ನಿಬಂಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.