ವರ್ಚುವಲ್ ಮೂಲಕ ಧಾರವಾಡದಲ್ಲಿ `ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕ್ಯಾಂಪಸ್' ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ವರ್ಚುವಲ್ ಮೂಲಕ ಧಾರವಾಡದಲ್ಲಿ `ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕ್ಯಾಂಪಸ್' ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಧಾರವಾಡ : ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವರ್ಚುವಲ ಮೂಲಕ ಧಾರವಾಡದಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕ್ಯಾಂಪಸ್ ಉದ್ಘಾಟಸಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ರಾಜ್ಯ ಸರ್ಕಾರವು ಶಿಕ್ಷಣದ ಸಾರ್ವತ್ರೀಕರಣಕ್ಕೆ ಹೆಚ್ಚಿನ ಕ್ರಮವಹಿಸಿ, ಅನುದಾನ ನೀಡಿದೆ.

ಜಿಲ್ಲೆಗಳಲ್ಲಿ ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದೆ,

ರಾಷ್ಟ್ರಕ್ಕೆ ಮಾದರಿಯಾಗಿರುª,À ಉನ್ನತ ಶಿಕ್ಷಣ ಇಲಾಖೆ ಅದೀನದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನೂತನ ಕ್ಯಾಂಪಸ್ ಉದ್ಘಾಟನೆ ಹೆಮ್ಮೆ ತಂದಿದೆ.ಲಕ್ಷಾಂತರ ಮಕ್ಕಳಿಗೆ ಪಾಠ ಭೋದನೆ ಮಾಡುವ ಶಿಕ್ಷಕರಿಗೆ ವೃತ್ತಿಪರವಾದ ತರಬೇತಿಯ ಕೊರತೆಯನ್ನು ಉನ್ನತ ಶಿಕ್ಷಣ ಅಕಾಡೆಮಿ ಪರಿಹರಿಸಿದೆ ಎಂದರು.

ಇದೆ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 7 ಹೊಸ ವಿಶ್ವವಿದ್ಯಾಲಯಗಳನ್ನು ಮುಖ್ಯ ಮಂತ್ರಿಗಳು ಉದ್ಘಾಟಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದೊಂದಿಗೆ ಜ್ಞಾನ ಮತ್ತು ಕೌಶಲ್ಯ ಬೆಳೆಸಲು ಪ್ರಾಶಸ್ತ್ಯ ನೀಡಲಾಗಿದೆ ಎಂದರು.

ಬೆಂಗಳೂರು ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ ಎಸ್.ಆರ್., ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ. ಹಾಗೂ ಇತರ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

ಧಾರವಾಡ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕ್ಯಾಂಪಸ್‍ದಲ್ಲಿ ನಿರ್ದೇಶಕ ಡಾ.ಎಸ್.ಎಂ.ಶಿವಪ್ರಸಾದ ಉಪವಿಭಾಗಧಿಕಾರಿ ಅಶೋಕ ತೆಲಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಮುಖ್ಯಮಂತ್ರಿ ಕಾರ್ಯಕ್ರಮದ ನಂತರ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ.ಶಿವಪ್ರಸಾದ ಅವರು ಮಾತನಾಡಿ, ಅಕಾಡೆಮಿ ತನ್ನ ಕಾರ್ಯಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿದೆ. ದೇಶದಲ್ಲಿರುವ ಏಕೈಕ ಸಂಸ್ಥೆ ಇದಾಗಿದೆ ಕಳೆದ 4 ವರ್ಷದಲ್ಲಿ 21,000 ಅಧ್ಯಾಪಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.