ಹುಬ್ಬಳ್ಳಿಯಲ್ಲಿ ಕೊಲೆ, ಸುಲಿಗೆ, ಪ್ರಕರಣ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್ : ರೌಡಿಶೀಟರ್‌ಗಳಿಗೆ ಕಮಿಷನರೇಟ್ ಖಡಕ್ ವಾರ್ನಿಂಗ್
ಈಗಾಗಲೇ ರಾಜ್ಯದೆಲ್ಲೆಡೆ ಮುಂದಿನ ವಿಧಾನ ಸಭೆ ಚುನಾವಣೆ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಯಾವುದು ಕೊಲೆ, ಸುಲಿಗೆ, ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದು , ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 8 ಕೊಲೆಗಳಾಗಿವೆ. ಸಣ್ಣ ಪುಟ್ಟವಿಷಯಗಳಿಗೆಲ್ಲ ನೆತ್ತರು ಹರಿಯುತ್ತಿದೆ. ಇಂತಹ ಘಟನೆಗಳು ಮರುಕಳಿಸಬಾರದು. ಚುನಾವಣೆ ಹತ್ತಿರವಾಗುತ್ತಿದ್ಧಂತೆ ಜಿಲ್ಲೆಗಳಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು ಈಗಾಗಲೇ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಅಧಿಕ ರೌಡಿಶೀಟರ್‌ಗಳ ಪರೇಡ್ ನಡೆಸಿ, ನಿಮ್ಮ ಹಳೆ ಚಾಳಿಯನ್ನೆಲ್ಲ ಬಿಟ್ಟುಬಿಡಿ , ಈಬಾರಿ ಚುನಾವಣೆ ಸಮಯದಲ್ಲಿ ಮತ್ತೆ ಪ್ರಕರಣಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತ ಖಡಕ್ ವಾರ್ನಿಂಗ್ ನೀಡಿದ್ದಾರೆ.