ರಾತ್ರಿ ವೇಳೆ ಗೂಂಡಾಗಿರಿ ನಡೆಸುವುದು ಪುರುಷಾರ್ಥಾನಾ.? MES ಪುಂಡರ ವಿರುದ್ಧ ಕಿಡಿಕಾರಿದ ಸಿಎಂ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಗುಡುಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಎಂಇಎಸ್ ನಶಿಸಿ ಹೋಗುವ ಕಾಲ ಬಂದಿದೆ ಎಂದಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾತ್ರೋ ರಾತ್ರಿ ಕೆಲ ಕಿಡಿಗೇಡಿಗಳು ಇಂತಹ ದಾಂಧಲೆ ನಡೆಸಿದ್ದಾರೆ.
ಎಂಇಎಸ್ ನಶಿಸಿ ಹೋಗುವ ಕಾಲ ಬಂದಿದೆ. ಇಂಥಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿವೇಶನ ಮುಗಿಯುತ್ತಿದ್ದಂತೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು. ಇನ್ನು ಬೆಳಗಾವಿಯಲ್ಲಿ ಪುಂಡಾಟ ಮೆರೆದಿದ್ದ 27 ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಎಲ್ಲಾ ಆರೋಪಿಗಳು ಹಿಂಡಲಗಾ ಜೈಲು ಪಾಲಾಗಿದ್ದಾರೆ.