ರಾಜ್ಯ ಸರ್ಕಾರದಿಂದ 'ಮೃತ ಫಾರೆಸ್ಟ್ ಗಾರ್ಡ್ ಸುಂದರೇಶ್' ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ

ರಾಜ್ಯ ಸರ್ಕಾರದಿಂದ 'ಮೃತ ಫಾರೆಸ್ಟ್ ಗಾರ್ಡ್ ಸುಂದರೇಶ್' ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು: ಸಕಲೇಶಪುರದಲ್ಲಿನ ರಕ್ಷಿತಾರಾಣ್ಯಕ್ಕೆ ಬೆಂಕಿ ಬಿದ್ದ ವೇಳೆಯಲ್ಲಿ, ಬೆಂಕಿಯನ್ನು ನಂದಿಸೋದಕ್ಕೆ ಫಾರೆಸ್ಟ್ ಗಾರ್ಡ್ ಸುಂದರೇಶ್ ಸೇರಿದಂತೆ ಇತರರು ತೆರಳಿದ್ದರು. ಈ ವೇಳೆ ಬೆಂಕಿಗೆ ಸಿಕ್ಕು ಸುಂದರೇಶ್ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಈಗ ಸರ್ಕಾರ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ಘೋಷಿಸಿದೆ.

ಈ ಕುರಿತಂತೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದಂತ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು, ಬೆಂಕಿ ನಂದಿಸೋ ಸಮಯದಲ್ಲಿ ಸಕಲೇಶಪುರದ ರಕ್ಷಿತಾರಣ್ಯದಲ್ಲಿ ಅಗ್ನಿ ಅವಘಡದಲ್ಲಿ ಮೃತಪಟ್ಟ ಫಾರೆಸ್ಟ್ ಗಾರ್ಡ್ ಸುಂದರೇಶ್ ಕುಟುಂಬಕ್ಕ 50 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ. ಅಲ್ಲದೇ ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ನಿರ್ಧರಿಸಲಾಗಿದೆ ಎಂದರು.

ಫಾರೆಸ್ಟ್ ಗಾರ್ಡ್ ಸುಂದರೇಶ್ ಸಾಮಾನ್ಯ ಗಸ್ತು ತಿರುಗಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಇದೇ ಘಟನೆಯಲ್ಲಿ ಇನ್ನೊಬ್ಬ ಅಧಿಕಾರಿ ಕೂಡ ಬೆಂಕಿಯಿಂದ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಮೃತ ಕುಟುಂಬಕ್ಕೆ ಇದುವರೆಗೆ 30 ಲಕ್ಷ ರೂ ಪರಿಹಾರ ನೀಡಲಾಗುತ್ತಿತ್ತು, ಈಗ ಅದನ್ನು 50 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.