ರಾಜಧಾನಿ ಟೋಕಿಯೋ ಬಿಟ್ಟು ಹೋಗೋಕೆ ಪ್ರಜೆಗಳಿಗೆ ಹಣ ಕೊಡ್ತಿದೆ ಜಪಾನ್‌

ರಾಜಧಾನಿ ಟೋಕಿಯೋ ಬಿಟ್ಟು ಹೋಗೋಕೆ ಪ್ರಜೆಗಳಿಗೆ ಹಣ ಕೊಡ್ತಿದೆ ಜಪಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದ್ಯೋಗ, ಉತ್ತಮ ಬದುಕನ್ನರಿಸಿ ಗ್ರಾಮೀಣ ಪ್ರದೇಶಗಳಿಂದ ಅಥವಾ ಚಿಕ್ಕ ಚಿಕ್ಕ ಪಟ್ಟಣಗಳಿಂದ ಜನರು ದೊಡ್ಡ ಶಹರಗಳ ಕಡೆ ವಲಸೆ ಹೋಗೋದು ಇಂದಿ ಪ್ರಪಂಚದಲ್ಲಿ ಸರ್ವೇಸಾಮಾನ್ಯ. ಭಾರತವೊಂದೇ ಅಲ್ಲ ಜಗತ್ತಿನಾದ್ಯಂತ ಇದು ರೂಢಿಯಲ್ಲಿದೆ.

ಹೀಗಾಗಿಯೇ ದೊಡ್ಡ ದೊಡ್ಡ ಪಟ್ಟಣಗಳು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು ನಗರೀಕರಣ ಎಲ್ಲೆಡೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟೋಕೆ ಜಪಾನ್‌ ಸರ್ಕಾರ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ರಾಜಧಾನಿ ಟೋಕಿಯೋ ಬಿಟ್ಟು ಹೋಗೋರಿಕೆ ಹಣ ನೀಡುವ ಮೂಲಕ ನಗರ ವಲಸೆಯ ಚಿತ್ರಣವನ್ನು ಬದಲಾಯಿಸಲು ಮುಂದಾಗಿದೆ.

ಈ ವರ್ಷದ ಏಪ್ರಿಲ್‌ ನಿಂದ ಈ ಯೋಜನೆಯನ್ನು ಜಾರಿಗೊಳಿಸಲು ಜಪಾನ್‌ ಸರ್ಕಾರ ನಿರ್ಧರಿಸಿದ್ದು ಒಂದು ಮಗುವಿಗೆ 1ಮಿಲಿಯನ್‌ ಯೆನ್‌ ಗಳಷ್ಟು ಹಣ ನೀಡುವುದಾಗಿ ಕುಟುಂಬಗಳಿಗೆ ಆಫರ್‌ ಮಾಡುತ್ತಿದೆ. ಟೋಕಿಯೋದಲ್ಲಿನ ಜನಸಂಖ್ಯಾ ಒತ್ತಡವನ್ನು ಕಡಿಮೆ ಮಾಡಲು ಸ್ಥಳೀಯ ಸರ್ಕಾರ ಹಾಗು ಜಪಾನಿನ ಕೇಂದ್ರ ಸರ್ಕಾರಗಳೆರಡೂ ಸೇರಿ ಈ ಹಣವನ್ನು ನೀಡಲಿವೆ. ನಗರ ವಲಸೆಯಿಂದಾಗಿ ಜಪಾನಿನ ಚಿಕ್ಕ ಚಿಕ್ಕ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು ಹಾಗು ಸಣ್ಣ ನಗರಗಳಲ್ಲಿ ಜನಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ಪ್ರಮುಖ ನಗರ ಟೋಕಿಯೋದ ಮೇಲಿನ ಜನಸಂಖ್ಯಾ ಭಾರವನ್ನು ತಗ್ಗಿಸಲು ಈ ಕ್ರಮ ಕೈಗೊಂಡಿರುವುದಾಗಿ ಜಪಾನ್‌ ಸರ್ಕಾರಿ ಮೂಲಗಳು ತಿಳಿಸಿವೆ.

ಟೋಕಿಯೋ ವನ್ನು ತೊರೆಯುವವರಿಗೆ ಹಣ ಸಹಾಯ ಮಾಡಲಿರೋ ಜಪಾನ್‌, ಹಳ್ಳಿಗಳನ್ನು ಬಿಟ್ಟು ಪರ್ವತ ಪ್ರದೇಶಗಳಲ್ಲಿ ನೆಲೆಸುವವರಿಗೆ ಹೆಚ್ಚಿನ ಪರಿಹಾರ ನೀಡುವುದಾಗಿಯೂ ಹೇಳಿದೆ. ನಗರಗಳಲ್ಲಿನ ಒತ್ತಡ, ಮಾಲಿನ್ಯ ಇತ್ಯಾದಿಗಳನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯಕಾರಿಯಾಗಲಿದೆ. ಕೋವಿಡ್‌ ಸಾಂಕ್ರಾಮಿಕದ ನಂತರ ಟೋಕಿಯೋದಲ್ಲಿ ಜನಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಈ ಭಾರವನ್ನು ಇನ್ನೂ ತಗ್ಗಿಸಲು ಜಾಪನ್‌ ಇಂಥಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.