ಯಶವಂತಪುರದ 'ಎ' ಕ್ಯಾಬಿನ್ನ ಸಿಗ್ನಲ್ ಕಾಮಗಾರಿ ಹಿನ್ನೆಲೆ: ಈ ರೈಲುಗಳ ಸಂಚಾರ ನಿಯಂತ್ರಣ, ರದ್ದು
ಬೆಂಗಳೂರು: ಯಶವಂತಪುರದ 'ಎ' ಕ್ಯಾಬಿನ್ನ ಸಿಗ್ನಲ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದರೇ, ಮತ್ತೆ ಕೆಲ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗಿದೆ ರೈಲುಗಳ ನಿಯಂತ್ರಣ/ ಭಾಗಶಃ ರದ್ದು
ಯಶವಂತಪುರದ 'ಎ' ಕ್ಯಾಬಿನ್ನ ಸಿಗ್ನಲ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ನಿಯಂತ್ರಣ ಮತ್ತು ಭಾಗಶಃ ರದ್ದುಗೊಳಿಸಲಾಗುತ್ತಿದೆ. ಅವುಗಳ ಮಾಹಿತಿ. ಏಪ್ರಿಲ್ 7, 2023 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17392 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಚಿಕ್ಕಬಾಣಾವರನಲ್ಲಿ 35 ನಿಮಿಷ ನಿಯಂತ್ರಿಸಿ, ಯಶವಂತಪುರ - ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಳಿಸಲಾಗುತ್ತಿದೆ. ಹೀಗಾಗಿ ಯಶವಂತಪುರ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಏಪ್ರಿಲ್ 8, 2023 ರಂದು ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06243 ಕೆ.ಎಸ್.ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲನ್ನು ಕೆ.ಎಸ್.ಆರ್ ಬೆಂಗಳೂರು-ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಿದೆ. ಈ ರೈಲು ಯಶವಂತಪುರ ನಿಲ್ದಾಣದಿಂದ ತನ್ನ ನಿಗದಿತ ಸಮಯದೊಂದಿಗೆ ಹೊರಡಲಿದೆ.ರೈಲು ತಡವಾಗಿ ಪ್ರಾರಂಭ
ಏಪ್ರಿಲ್ 11 2023 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06270 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮೈಸೂರು ವಿಶೇಷ ಎಕ್ಸ್ಪ್ರೆಸ್ ರೈಲು ಬೆಂಗಳೂರು ಯಾರ್ಡ್ನಲ್ಲಿ ಎಂಜಿನಿಯರಿಂಗ್ ಕೆಲಸದ ನಿಮಿತ್ತ ಮೂಲ ನಿಲ್ದಾಣದಿಂದ 45 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.