ಮುತಾಲಿಕ್ ಕಾಂಗ್ರೆಸ್​ ಪಕ್ಷದ ಬಿ ಟೀಮ್ ಎಂದ ಬಿಜೆಪಿ; ಕಮಲ ಪಕ್ಷದ ವಿರುದ್ಧ ಗರಂ

ಮುತಾಲಿಕ್ ಕಾಂಗ್ರೆಸ್​ ಪಕ್ಷದ ಬಿ ಟೀಮ್ ಎಂದ ಬಿಜೆಪಿ; ಕಮಲ ಪಕ್ಷದ ವಿರುದ್ಧ ಗರಂ

ಧಾರವಾಡ: ಇತ್ತೀಚಿಗೆ ವಕ್ಫ್ ಅಧ್ಯಕ್ಷರು ಮುಸ್ಲಿಂ ಕಾಲೇಜು ಆರಂಭಿಸುವುದಾಗಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದೇ ಕಾರಣಕ್ಕೆ ಇದೀಗ ಬಿಜೆಪಿ ಮುತಾಲಿಕ್ ವಿರುದ್ಧವೇ ತಿರುಗಿ ಬಿದ್ದಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಮೋದ್​ ಮುತಾಲಿಕ್ ಕಾಂಗ್ರೆಸ್​ನ ಬಿ ಟೀಮ್ ಎಂದು ಹೇಳುತ್ತಿದೆ. ಇದರಿಂದಾಗಿ ಪ್ರಮೋದ ಮುತಾಲಿಕ್ ಗರಂ ಆಗಿದ್ದಾರೆ.