ಮುಂದಿನ 90 ದಿನಗಳಲ್ಲಿ ಚೀನಾದಲ್ಲಿ ಲಕ್ಷಾಂತರ ಮಂದಿ ಸಾಯಬಹುದು; ರೋಗಶಾಸ್ತ್ರಜ್ಞ

ಮುಂದಿನ 90 ದಿನಗಳಲ್ಲಿ ಚೀನಾದಲ್ಲಿ ಲಕ್ಷಾಂತರ ಮಂದಿ ಸಾಯಬಹುದು; ರೋಗಶಾಸ್ತ್ರಜ್ಞ

'ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ ಶೇ.60 ರಷ್ಟು ಮಂದಿ ಕೊರೊನಾ ಸೋಂಕಿಗೆ ತುತ್ತಾಗಲಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳಬಹುದು' ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್ ಫೀಗಲ್ ಹೇಳಿದ್ದಾರೆ. ಬೀಜಿಂಗ್​ನಲ್ಲಿ ಮೀಸಲಿಟ್ಟಿರುವ ಸ್ಮಶಾನವು ಈಗಾಗಲೇ ಮೃತದೇಹಗಳಿಂದ ತುಂಬಿದೆ. ವೈರಸ್ ಚೀನಾದ ರಾಜಧಾನಿಯ ಮೂಲಕ ವ್ಯಾಪಿಸುತ್ತಿದೆ. ದೇಶದ ಸಾಂಕ್ರಾಮಿಕ ನಿರ್ಬಂಧಗಳ ಹಠಾತ್ ಸಡಿಲಗೊಳಿಸುವಿಕೆಯ ಕಾರಣದಿಂದಾಗಿ ಏಕಾಏಕಿ ಹೆಚ್ಚುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.