ಮಧ್ಯಪ್ರದೇಶ; ಮಹಿಳೆಯ ಕೈಗಳನ್ನು ಹಗ್ಗದಿಂದ ಕಟ್ಟಿ ಥಳಿಸಿದ ನೆರೆಹೊರೆಯವರು. ವಿಡಿಯೋ ವೈರಲ್
ಭೋಪಾಲ್(ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನೆರೆಹೊರೆಯವರು ವೃದ್ಧ ಮಹಿಳೆಯ ಎರಡೂ ಕೈಗಳನ್ನು ಕಟ್ಟಿ ಥಳಿಸಿದ ಘಟನೆ ನಡೆದಿದೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ತನ್ನ ನೆರೆಹೊರೆಯ ಕೆಲವರು ವಿನಾಕಾರಣ ತನ್ನೊಂದಿಗೆ ಜಗಳವಾಡಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದು, ತನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಹೀರಾಪುರ ಗ್ರಾಮದ ತನ್ನ ಮನೆಯಲ್ಲಿ ಒಬ್ಬಳೇ ವಾಸಿಸುತ್ತಾಳೆ. ಆಕೆಯ ಮಗ ಇಂದೋರ್ನಲ್ಲಿ ಕಾರ್ಮಿಕ. ಶುಕ್ರವಾರ ತನ್ನ ನೆರೆಮನೆಯ ಗಣೇಶ್ ಎಂಬಾತ ಕುಡಿದು ತನ್ನ ಮನೆಗೆ ಬಂದು ಜಾತಿ ನಿಂದನೆಮಾಡುತ್ತಿದ್ದ. ಇದರಿಂದ ನೊಂದ ಮಹಿಳೆ ಆತನ ವಿರುದ್ಧ ತಿರುಗಿಬಿದ್ದಿದ್ದಾಳೆ. ಈ ವೇಳೆ, ಆತನ ಪತ್ನಿ ಹಾಗೂ ತಾಯಿ ಕೂಡ ಅಲ್ಲಿಗೆ ಬಂದು ಆಕೆಯನ್ನು ಎಳೆದೊಯ್ದು ತನ್ನ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮನೀಶ್ ಖತ್ರಿ ತಿಳಿಸಿದ್ದಾರೆ.