ಮದುವೆ ಮನೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ದಾವಣಗೆರೆ: ಮದುವೆ ಮನೆಯಲ್ಲಿ ಊಟ ಮಾಡಿದ ಸುಮಾರು 150 ಜನರು ಅಸ್ವಸ್ಥರಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥಗೊಂಡ 10 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದೇವರ ಹೊನ್ನಾಳಿಯ ಚಂದ್ರಪ್ಪ ಎಂಬುವರ ಮಗನ ಮದುವೆ ಹಳೇ ದೇವರ ಹೊನ್ನಾಳಿಯ ಆಲದಹಳ್ಳಿ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿತ್ತು. ಎಲ್ಲರೂ ಮದುವೆಯ ಊಟ ಮಾಡಿದ್ದರು. ರಾತ್ರಿ 1 ಗಂಟೆ ನಂತರ ವಾಂತಿ, ಭೇದಿ, ತಲೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಡರಾತ್ರಿ ಕೋಳಾಲಮ್ಮ ದೇಗುಲದ ಶ್ರೀಧರಮ್ಮ ಮತ್ತು ಅರ್ಚಕ ನಿಗೂಢ ಸಾವು! ಸಾವಿನ ಸುತ್ತ ಅನುಮಾನದ ಹುತ್ತ