ಮಥುರಾದ ಬಟ್ಟೆ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ

ಉತ್ತರ ಪ್ರದೇಶ : ಮಥುರಾದ ಬಟ್ಟೆ ಶೋರೂಂನ ಮೂರು ಮಹಡಿಯ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆ ನಂದಿಸಲು ಸುಮಾರು 6-7 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿವೆ.ನಗರದ ಜನನಿಬಿಡ ಪ್ರದೇಶದಲ್ಲಿ ಈ ದುರಂತ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಸದ್ಯದ ಮಟ್ಟಿಗೆ ಬೆಂಕಿ ನಿಯಂತ್ರಣದಲ್ಲಿದೆ, ನಾವು ಬೆಂಕಿಯನ್ನು ಪಕ್ಕದ ಕಟ್ಟಡಗಳಿಗೆ ಹರಡಲು ಬಿಡಲಿಲ್ಲ' ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ..