ಮತದಾರರ ಸೆಳೆಯೋದಕ್ಕೆ ಮಧುಗಿರಿ JDS ಅಭ್ಯರ್ಥಿಯಿಂದ ʼಧರ್ಮಸ್ಥಳ ಪ್ರವಾಸ ಪ್ಲಾನ್ʼ : ಹೋಗದಿದ್ರೆ ʼಬೆದರಿಕೆ ಫಿಕ್ಸ್
ತುಮಕೂರು ; ಮುಂದಿನ ವಿಧಾನ ಸಭೆ ಚುನಾವಣೆಗೆ ಮತದಾರರ ಸೆಳೆಯೋದಕ್ಕೆ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಈ ಬೆನ್ನಲ್ಲೆ ಇದೀಗ ಮಧುಗಿರಿ JDS ಅಭ್ಯರ್ಥಿ ಕಡೆಯಿಂದ ಪುಣ್ಯಕ್ಷೇತ್ರ ಧರ್ಮಸ್ಥಳ ಪ್ರವಾಸ ಅವಕಾಶ ಕಲ್ಪಿಸಿದ್ದು, ಹೋಗದಿದ್ರೆ ಬೆದರಿಕೆ ಹಾಕುತ್ತಿರೋದು ಕಂಡು ಬಂದಿದೆ,
ಮಧುಗಿರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಂ.ವಿ.ವೀರಭದ್ರಯ್ಯರವರ ಬೆಂಬಲಿಗರಿಗೆ ಮತದಾರರ ಸೆಳೆಯೋದಕ್ಕೆ ಹೊಸ ಪ್ಲಾನ್ ಮಾಡಿದ್ದು ಗ್ರಾಮ ಜನರಿಗೆ ಟ್ರಿಪ್ ಭಾಗ್ಯವನ್ನು ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಈ ಭಾಗದಲ್ಲಿ ಪ್ರವಾಸಕ್ಕೆ ಹೊರಟಿರುವ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಬೇಡಿ ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿರುವುದಾಗಿ ತಿಳಿಕೊಳ್ಳುವಂತೆ JDS ಅಭ್ಯರ್ಥಿಪ್ಲಾನ್ ಮಾಡಿದ್ದಾರೆ . ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರವಾಸಕ್ಕೆ ಶಾಸಕರು 20 ಸಾವಿರ ನೀಡಿ ಹೊರನಾಡು, ಧರ್ಮಸ್ಥಳ, ಕುಕ್ಕೆ ಸೌದಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ಬನ್ನಿ ಎಂದು ಮುಖಂಡರು ಹೇಳಿರುವುದು ವೈರಲ್ ಆಗಿದೆ. ಇನ್ನೂ ಪ್ರವಾಸಕ್ಕೆ ತೆರಳೋದಕ್ಕೆ ನಿರಕರಿಸಿ ಜನರಿಗೆ ಬೆದರಿಕೆಯನ್ನು ಹಾಕಲಾಗಿದೆ ಎಂದು ತಿಳಿಯಲಾಗುತ್ತಿದೆ.
ಅಷ್ಟೇ ಅಲ್ಲದೇ ಕೆಲ ಭಾಗಗಳಲ್ಲಿ ಮನೆ ಮನೆಗೆ ಪಕ್ಷದ ಕರಪತ್ರದೊಂದಿಗೆ 500 ರೂಗಳನ್ನು ಇಟ್ಟು ಹಂಚಿರೋದು ವೈರಲ್ ಆಗಿತ್ತು. ಈ ಪ್ರವಾಸ ಭಾಗ್ಯದ ವಿರುದ್ಧ ದೊಡ್ಡೇರಿ ಹೋಬಳಿಯ ಮುಖಂಡರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.