ಮತದಾರರಿಗೆ ʼಫುಡ್‌ ಕಿಟ್‌ ಹಂಚಿಕೆʼ ಆರೋಪ : ಮಾಜಿ ಸಚಿವ ʼಕೃಷ್ಣಯ್ಯ ಶೆಟ್ಟಿ ವಿರುದ್ಧ FIR ʼದಾಖಲು

ಮತದಾರರಿಗೆ ʼಫುಡ್‌ ಕಿಟ್‌ ಹಂಚಿಕೆʼ ಆರೋಪ : ಮಾಜಿ ಸಚಿವ ʼಕೃಷ್ಣಯ್ಯ ಶೆಟ್ಟಿ ವಿರುದ್ಧ FIR ʼದಾಖಲು

ಬೆಂಗಳೂರು : ಗಾಂಧಿನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹೆಸರಲ್ಲಿ ಮತದಾರರಿಗೆ ಹಂಚಲು ಫುಡ್ ಕಿಟ್‌ ತಯಾರಿ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ಮತದಾರರ ಸೆಳೆಯೋದಕ್ಕೆ ಹಣ, ಹೆಂಡ, ಕುಕ್ಕರ್‌, ಗಿಫ್ಟ್‌ಗಳನ್ನು ಕೊಡಲು ಸಾಗಿಸುತ್ತಿರುವ ವಸ್ತುಗಳನ್ನು ಚೆಕ್‌ ಪೋಸ್ಟ್‌ಗಳಲ್ಲಿ ಜಪ್ತಿ ಮಾಡಲಾಗುತ್ತಿದೆ .

ಅದರಂತೆ ಇದೀಗ ಬೆಂಗಳೂರಿನ ಗಾಂಧಿನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೃಷ್ಣಯ್ಯ ಶೆಟ್ಟಿ ಹೆಸರಲ್ಲಿ ಫುಡ್ ಕಿಟ್‌ ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೆರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದು, ಅಕ್ಕಿ, ಬೆಳೆ, ಬೆಲ್ಲ, ಡ್ರೈಫ್ರೂಟ್ಸ್, ಅಡುಗೆ ಎಣ್ಣೆ ಸೇರಿದಂತೆ ಗೃಹ ಬಳಕೆ ದಿನಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಚುನಾವಣಾಧಿಕಾರಿ ಲಕ್ಷ್ಮಣ್‌ ನೀಡಿದ ದೂರಿನ ಅನ್ವಯ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.