987 ರ ಮಲಿಯಾನ ಗಲಭೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆಯಿಂದ 40 ಆರೋಪಿಗಳು ಖುಲಾಸೆ

987 ರ ಮಲಿಯಾನ ಗಲಭೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆಯಿಂದ 40 ಆರೋಪಿಗಳು ಖುಲಾಸೆ

ಮೀರತ್: 36 ವರ್ಷ ಹಳೆಯದಾದ ಮಲಿಯಾನ ಕೋಮು ಘರ್ಷಣೆ ಪ್ರಕರಣದಲ್ಲಿ ಬೆಂಕಿ ಹಚ್ಚುವಿಕೆ, ಕೊಲೆ ಮತ್ತು ಗಲಭೆ ಪ್ರಕರಣದ ಆರೋಪಿಗಳಾಗಿರುವ 40 ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಮೀರತ್ ನ್ಯಾಯಾಲಯವು ಖುಲಾಸೆಗೊಳಿಸಿದೆ. 23 ಆರೋಪಿಗಳು ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದರು.

ಆದರೆ ಇದುವರೆಗೂ 30 ಆರೋಪಿಗಳು ಪತ್ತೆಯಾಗಿಲ್ಲ.

ಮೇ 23, 1987 ರಂದು ಮಲಿಯಾನ ಗಲಭೆಯಲ್ಲಿ 63 ಜನರು ಮತ್ತು ಹಾಶಿಂಪುರದಲ್ಲಿ 42 ಮಂದಿ ಸಾವನ್ನಪ್ಪಿದರು, 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಹಾಶಿಂಪುರ ಘಟನೆಯ ಒಂದು ದಿನದ ನಂತರ ಮಲಿಯಾನಾದಲ್ಲಿ ಗಲಭೆಗಳು ನಡೆದವು. ಹಲವು ಮನೆಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಲೂಟಿ ನಡೆಸಿದ್ದಾರೆ. ಈ ವೇಳೆ ಮೊಹಲ್ಲಾ ನಿವಾಸಿ ಯಾಕೂಬ್ ಎಂಬುವವರ ಪರವಾಗಿ ಗಲಭೆ ವರದಿ ದಾಖಲಾಗಿತ್ತು. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಗುಂಡುಗಳನ್ನು ಹಾರಿಸಲಾಗಿದೆ ಎಂಬುದು ಫಿರ್ಯಾದಿದಾರರ ಆರೋಪ. ಈ ಸಂಬಂಧ ಟಿ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲಿಯಾನ ಪ್ರಕರಣದಲ್ಲಿ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಲಖ್ವಿಂದರ್ ಸೂದ್ ಶನಿವಾರ, 40 ಆರೋಪಿಗಳನ್ನು ಖುಲಾಸೆಗೊಳಿಸಿದರು. ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂತ್ರಸ್ತೆಯ ಕುಟುಂಬಸ್ಥರು ತಿಳಿಸಿದ್ದಾರೆ.

ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಸಿಎಲ್ ಬನ್ಸಾಲ್ ಅವರು, ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ. ಮಲಿಯಾನ ಪ್ರಕರಣದಲ್ಲಿ 800 ಕ್ಕೂ ಹೆಚ್ಚು ದಿನಾಂಕಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯಲ್ಲಿ 74 ಸಾಕ್ಷಿಗಳಿದ್ದು, ಅದರಲ್ಲಿ 25 ಮಂದಿ ಮಾತ್ರ ಉಳಿದಿದ್ದಾರೆ. ಕೆಲವು ಆರೋಪಿಗಳು ಪತ್ತೆಯಾಗಿಲ್ಲ ಎಂದಿದ್ದಾರೆ.