ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ 'ಲೋಹಿತಾಶ್ವ

ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ 'ಲೋಹಿತಾಶ್ವ

ಬೆಂಗಳೂರು: ಕನ್ನಡದ ಹಿರಿಯ ನಟ ಲೋಹಿತಾಶ್ವ ನಿನ್ನೆ ವಿಧಿವಶರಾಗಿದ್ದಾರೆ.ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ವಿಧಿವಶರಾಗಿದ್ದಾರೆ.

ಈ ಮೂಲಕ ಕನ್ನಡ ಚಿತ್ರರಂಗ ಓರ್ವ ಅದ್ಭುತ ನಟನನ್ನು ಕಳೆದುಕೊಂಡಿದೆ.

ಇಂದು ಅವರ ಅಂತಿಮ ಸಂಸ್ಕಾರವನ್ನು ತುಮಕೂರು ಬಳಿ ಇರುವ ಅವರ ಸ್ವಗ್ರಾಮವಾದ ತೊಂಡಗೆರೆಯಲ್ಲಿ ಅವರ ತೋಟದಲ್ಲಿ ನೆರವೇರಿಸಲಾಯಿತು. ಈ ವೇಳೆ ಲೋಹಿತಾಶ್ವ ಕುಟುಂಬದವರು, ಬಂಧು ಮಿತ್ರರು, ಸಿನಿಮಾ ಗಣ್ಯರು ಹಾಜರಿದ್ದರು.

ತಮ್ಮ ಕಂಚಿನ ಕಂಠದ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಲೋಹಿತಾಶ್ವ ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾಗಿದ್ದು, ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೋಹಿತಾಶ್ವ ಅವರು ಈವರೆಗೂ ಒಟ್ಟು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಟ ಶಂಕರ್ ನಾಗ್ ಅಭಿನಯದ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ತರ ಗಿರೀಶ್ ಕಾಸರವಳ್ಳಿಯವರ 'ಗೃಹಭಂಗ', ಜಿ.ವಿ ಅಯ್ಯರ್ ನಿರ್ದೇಶನದ 'ನಾಟ್ಯರಾಣಿ ಶಕುಂತಲಾ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಪ್ರಸಿದ್ದಿ ಪಡೆದಿದ್ದರು, ಹವ್ಯಾಸಿ ರಂಗ ಕಲಾವಿದರಾಗಿರುವ ಲೋಹಿತಾಶ್ವ ಅವರು ಚಸ್ನಾಳ ದುರಂತ, ದಂಗೆ ಮುಂಚಿನ ದಿನಗಳು, ಹುಲಿಯ ನೆರಳು,, ಮೆರವಣಿಗೆ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.