ಮಡಿಕೇರಿಯಲ್ಲಿ ʻಅಕ್ರಮ ಗಾಂಜಾ ಮಾರಾಟʼ ಮಾಡಲು ಯತ್ನ, ಇಬ್ಬರ ʻಆರೋಪಿಗಳು ಬಂಧನʼ

ಮಡಿಕೇರಿಯಲ್ಲಿ ʻಅಕ್ರಮ ಗಾಂಜಾ ಮಾರಾಟʼ ಮಾಡಲು ಯತ್ನ, ಇಬ್ಬರ ʻಆರೋಪಿಗಳು ಬಂಧನʼ

ಡೀಕೆರಿ : ವಿರಾಜಪೇಟೆ ತಾಲೂಕಿನ ಇಂಜಿಲಗೆರೆ ಗ್ರಾಮದ ಅಕ್ರಮ ಗಾಂಜಾ ಮಾರಾಟ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಲ್ಲುಕೋರೆ ನಿವಾಸಿ ಪ್ರವೀಣ (31), ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೋನು (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮೈಸೂರಿನ ಹೊರವಲಯದಲ್ಲಿ ಗಾಂಜಾ ಖರೀದಿಸುವ ಜಾಗವನ್ನು ತಿಳಿದು ಕೊಂಡಿದ್ದ ಸೋನು ಖಚಿತ ಮಾಹಿತಿ ಮೆರೆಗೆ ಸೋನು ತನ್ನ ಸ್ನೇಹಿತನಾದ ಪ್ರವೀಣ್‌ ಸೇರಿಕೊಂಡು ಹಣ ಹೊಂದಿಸಿಕೊಂಡು ಮೈಸೂರಿಗೆ ತೆರಳಿದ್ದಾರೆ. ಬಳಿಕ ಗಾಂಜಾ ಖರೀದಿಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಬಲೆ ಬೀಸಿದ್ದು, ಇಬ್ಬರನ್ನು ವಶಕ್ಕೆ ಪಡೆದು, 1.222 ಕೆಜಿ ಗಾಂಜಾ ಮತ್ತು 770 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸುಮಾರು 30 ಸಾವಿರ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ 20/ಬಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೇ 2020ರಲ್ಲಿ ಗಾಂಜಾ ಪ್ರಕರಣದಲ್ಲಿ ಸೋನು ಬಂಧಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದನು.ಜೈಲುವಾಸದ ಸಮಯದಲ್ಲಿ ಅನೇಕ ಮಂದಿಯ ಪರಿಚಯವಾಗಿದ್ದು, ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಖಚಿತ ಮಾಹಿತಿ ತಿಳಿದು ಈ ಕೃತ್ಯವನ್ನು ಎಸಗಲಾಗಿದೆ ಎಂದು ತಿಳಿದು ಬಂದಿದೆ.