ಮಕ್ಕಳನ್ನು ಇತರರೊಂದಿಗೆ ಬೆರೆಯಲು ಬಿಡಿ- ಡಿಮ್ಹಾನ್ಸ್ನ ಸಹಾಯಕ ಪ್ರಾಧ್ಯಾಪಕಿ
ಹುಬ್ಬಳ್ಳಿ: 'ಮಕ್ಕಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗುತ್ತಿದ್ದಾರೆಯೇ ಎಂದು ಗಮನಿಸಿ, ಸಮಸ್ಯೆಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ' ಎಂದು ಧಾರವಾಡದ ಡಿಮ್ಹಾನ್ಸ್ನ ಸಹಾಯಕ ಪ್ರಾಧ್ಯಾಪಕಿ ಡಾ. ಸ್ವಪ್ನ ಪಾಂಡುರಂಗಿ ಹೇಳಿದರು.
ಆಸ್ಪರ್ಜರ್ಸ್ ಸಿಂಡ್ರೋಮ್ (ಮಕ್ಕಳ ಬೆಳವಣಿಗೆಯಲ್ಲಿ ಕಂಡು ಬರುವ ವ್ಯತ್ಯಯ) ಇರುವ ಮಕ್ಕಳು ಎದುರಿಸುವ ಸಮಸ್ಯೆಗಳೇನು?
'ಫೆ. 18ಅನ್ನು ಅಂತರರಾಷ್ಟ್ರೀಯ ಆಸ್ಪರ್ಜರ್ಸ್ ಸಿಂಡ್ರೋಮ್ ದಿನ
ವನ್ನಾಗಿ ಆಚರಿಸಲಾಗುತ್ತದೆ. ಕಾಯಿಲೆ ಇರುವ ಮಕ್ಕಳು, ಅರ್ಥೈಸಿಕೊಂಡು ಮಾಡನಾಡುವದಿಲ್ಲ, ಭಾಷೆಯಲ್ಲಿ ಸ್ಪಷ್ಟತೆ ಇರುವುದಿಲ್ಲ. ಇತರರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ' ಎಂದು ರೋಗದ ಲಕ್ಷಣಗಳ ಬಗ್ಗೆ ವಿವರಿಸಿದರು.
'ಆನುವಂಶಿಕತೆ ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ಎನ್ನಬಹುದು. ಗರ್ಭಾವಸ್ಥೆಯಲ್ಲಿದ್ದಾಗ ತಾಯಿಗೆ ಮಧುಮೇಹ ಇದ್ದರೆ, ಹೊಟ್ಟೆಗೆ ಪೆಟ್ಟಾಗಿದ್ದರೆ, ಮಗುವಿಕ ತೂಕ, ಬೆಳವಣಿಗೆ ಕಡಿಮೆ ಇದ್ದರೆ ಈ ಕಾಯಿಲೆ ಬರುವ ಸಾಧ್ಯತೆಗಳಿರುತ್ತವೆ' ಎಂದು ತಿಳಿಸಿದರು.
'ಸಾವಿರಕ್ಕೆ ಒಬ್ಬರಲ್ಲಿ ಇಂಥ ಸಮಸ್ಯೆ ಕಾಣಸಿಗುತ್ತದೆ. ಸಾಮಾನ್ಯವಾಗಿ ಮೂರರಿಂದ ಏಳು ವರ್ಷದೊಳಗಿನ ಮಕ್ಕಳಲ್ಲಿ ಈ ಲಕ್ಷಣಗಳನ್ನು ಕಾಣ
ಬಹುದು. ಗಂಡು ಮಕ್ಕಳಲ್ಲಿ 4 ಪಟ್ಟು ಹೆಚ್ಚಾಗಿ ಈ ಸಮಸ್ಯೆಗಳು ಕಂಡು ಬರುತ್ತವೆ. ಇಂಥ ಸಮಸ್ಯೆಗಳಿಂದ ಮಕ್ಕಳು ಶಾಲೆಗಳಲ್ಲಿ ಗುಂಪು ಚಟುವಟಿಕೆ
ಗಳಲ್ಲಿ ಭಾಗವಹಿಸುವುದಿರಂದ ದೂರ ಉಳಿಯುತ್ತಾರೆ' ಎಂದೂ ಹೇಳಿದರು.
'ಇಂಥ ಸಮಸ್ಯೆಗಳಿರುವ ಮಕ್ಕಳನ್ನು ಪೋಷಕರು ಒಪ್ಪಿಕೊಳ್ಳಬೇಕು. ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು. ಮಗುವಿನ ಚಟುವಟಿಕೆಗಳ ಬಗ್ಗೆ ಪೋಷಕರು ಆಗಾಗ ನಿಗಾ ಇಡಬೇಕು. ಮಕ್ಕಳನ್ನು ಇತರರೊಂದಿಗೆ ಬೆರೆಯಲು ಬಿಡಬೇಕು' ಎಂದರು.
ಪೋಷಕರು, ಶಿಕ್ಷಕರ ಪಾತ್ರವೂ ಪ್ರಮುಖ: 'ಇಂಥ ಸಮಸ್ಯೆಗಳಿಗೆ ಸದ್ಯಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ, ಸಂಶೋಧನೆ ಹಂತದಲ್ಲಿದೆ. ರಿಹ್ಯಾಬಿಲಿಟೇಷನ್ ಒಂದೇ ಇದಕ್ಕೆ ಪರಿಹಾರ. ಮಕ್ಕಳು ಗುಣ
ಮುಖರಾಗುವಲ್ಲಿ ಪೋಷಕರು, ಶಿಕ್ಷಕರ ಪಾತ್ರವೂ ಪ್ರಮುಖವಾಗಿದೆ. ಅವರ ಆಸಕ್ತಿ ಗುರುತಿಸಿ, ಪ್ರೋತ್ಸಾಹಿಸಬೇಕು. ಇಂಥ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.