ಮಂಡ್ಯದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು!; ಬೆಲೆ ನೋಡಿದರೆ ಶಾಖ್‌ ಆಗೋದು ಗ್ಯಾರೆಂಟಿ!

ಮಂಡ್ಯದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು!; ಬೆಲೆ ನೋಡಿದರೆ ಶಾಖ್‌ ಆಗೋದು ಗ್ಯಾರೆಂಟಿ!

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ಬಂಡೂರು ಟಗರೊಂದು ದಾಖಲೆಯ ಹಣಕ್ಕೆ ಮಾರಾಟವಾಗಿದೆ. ಟಗರು ಬರೋಬ್ಬರಿ 1.91 ಲಕ್ಷ ರೂ.ಗೆ ಮಾರಾಟವಾಗಿದೆ.

ಕೃಷ್ಣಪ್ಪ ಎಂಬುವವರು ಟಗರನ್ನು ಈ ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ.

ಸಣ್ಣಪ್ಪ ಎಂಬವರು ಒಂದು ವಷದ ಹಿಂದೆ ಟಗರನ್ನು ೧ ಲಕ್ಷದ 5 ಸಾವಿರ ರೂ.ಗೆ ಖರೀದಿಸಿದ್ದರು.

ಇದೀಗ ಅದೇ ಟಗರನ್ನು 1.91 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಟಗರು ಖರೀದಿಸಿದ ಕೃಷ್ಣಪ್ಪ ಗ್ರಾಮದಲ್ಲಿ ಟಗರನ್ನು ಮೆರವಣಿಗೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.