ಭಾರೀ ಮಳೆ, ದಿಢೀರ್ ಪ್ರವಾಹಕ್ಕೆ 17 ಜನ ಬಲಿ, 100ಕ್ಕೂ ಅಧಿಕ ಜನ ನಾಪತ್ತೆ! ಹೇಗಿದೆ ಗೊತ್ತಾ ಇನ್ನೂ ಪರಿಸ್ಥಿತಿ!

ಭಾರೀ ಮಳೆ, ದಿಢೀರ್ ಪ್ರವಾಹಕ್ಕೆ 17 ಜನ ಬಲಿ, 100ಕ್ಕೂ ಅಧಿಕ ಜನ ನಾಪತ್ತೆ! ಹೇಗಿದೆ ಗೊತ್ತಾ ಇನ್ನೂ ಪರಿಸ್ಥಿತಿ!

ಆಂಧ್ರಪ್ರದೇಶ : ಆಂಧ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿಯವರೆಗೂ 17 ಜನ ಪ್ರಾಣ ಕಳೆದುಕೊಡಿದ್ದಾರೆ. ಅಲ್ಲದೇ, 100ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ.

ರಾಯಲಸೀಮೆ ಪ್ರಾಂತ್ಯ ಮಳೆಗೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್ ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 18 ಜನ ನಾಪತ್ತೆಯಾಗಿದ್ದಾರೆ.
ಭಾರಿ ಮಳೆಗೆ ಪರ್ವಾಹ ಪರಿಸ್ಥಿತಿ ಉಂಟಾಗಿದೆ. ರಾಜಾಂಪೇಟ್ ಪ್ರದೇಶದಲ್ಲಿ ಪರಿಹಾರ ಕಾರ್ಯಾವಚರಣೆ ನಡೆಯುತ್ತಿದ್ದು, ಇಲ್ಲಿಯವರೆಗೆ 12 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಂದಪಲ್ಲೆ, ಅಕೆಪಡು ಹಾಗೂ ನಂದಲೂರ್ ಗ್ರಾಮದಲ್ಲಿ ಬಸ್ಗಳು ಸಿಲುಕಿಕೊಂಡಿದ್ದವು. ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್ನ ಟಾಪ್ ಮೇಲೆ ಹತ್ತಿ ಜೀವ ಉಳಿಸಿಕೊಳ್ಳು ಪ್ರಯತ್ನಿಸಿದರು. ಪ್ರವಾಹಕ್ಕೆ ಕೊಚ್ಚಿಹೋದವರಲ್ಲಿ ಕೆಲವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ. ಆದರೂ ಮೂವತ್ತಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಪ್ರವಾಹದಿಂದಾಗಿ ಕೊಚ್ಚಿ ಹೋದ ಬಸ್ ಹಾಗೂ ಉಳಿದ ಎರಡು ಬಸ್ಗಳ ಟಾಪ್ ಮೇಲೆ ಜನರು ಜೀವ ಉಳಿಸಿಕೊಳ್ಳಲು ಹತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಮತ್ತೊಂದು ಘಟನೆಯಲ್ಲಿ ಅನಂತಪುರ ಜಿಲ್ಲೆಯ ವೆಲ್ದುರ್ತಿ ಗ್ರಾಮದಲ್ಲಿ ಚಿತ್ರಾವತಿ ನದಿಯ ಪ್ರವಾಹದಿಂದ ಸಿಲುಕಿಕೊಂಡಿದ್ದ 10 ಜನರನ್ನು ಬಾರತೀಯ ವಾಯು ಸೇನೆಯು ರಕ್ಷಿಸಿದೆ. ತಿರುಪತಿಯಲ್ಲಿ ಮಳೆಯಿಂದಾಗಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದು, ಘಾಟ್ ಗಳು ಕ್ಲೋಸ್ ಆಗಿವೆ. ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 15 ಸಾವಿರಯಾತ್ರಾರ್ಥಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಉಚಿತ ಆಹಾರ ಮತ್ತು ವಸತಿ ನೀಡುತ್ತಿದೆ. ಇಂದು ದೇವಸ್ಥಾನವನ್ನು ದರ್ಶನಕ್ಕೆ ಕ್ಲೋಸ್ ಮಾಡಲಾಗಿದ್ದು, ನಾಳೆ ತೆರೆಯುವ ನಿರೀಕ್ಷೆ ಇದೆ.