ಬ್ರಿಟನ್ ಮತ್ತು ಚೀನಾ ನಡುವಿನ 'ಗೋಲ್ಡನ್ ಯುಗ' ಮುಗಿಯಿತು..: ರಿಷಿ ಸುನಾಕ್

ಬ್ರಿಟನ್ ಮತ್ತು ಚೀನಾ ನಡುವಿನ 'ಗೋಲ್ಡನ್ ಯುಗ' ಮುಗಿಯಿತು..: ರಿಷಿ ಸುನಾಕ್

ಲಂಡನ್: ಯುನೈಟೆಡ್ ಕಿಂಗ್ ಡಮ್ ಮತ್ತು ಚೀನಾ ನಡುವಿನ ಇದುವರೆಗಿನ ಸ್ವರ್ಣ ಯುಗ ಮುಗಿಯಿತು. ಯು.ಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ತನ್ನ ಸರ್ವಾಧಿಕಾರಿ ಆಳ್ವಿಕೆಯೊಂದಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದರಿಂದ ಚೀನಾದ ಕಡೆಗಿನ ಮಾರ್ಗವನ್ನು ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ಯು.ಕೆ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.

ಲಂಡನ್‌ ನ ಗಿಲ್ಡ್‌ ಹಾಲ್‌ ನಲ್ಲಿ ನಡೆದ ಲಾರ್ಡ್ ಮೇಯರ್ ಔತಣಕೂಟದಲ್ಲಿ ತಮ್ಮ ಭಾಷಣದಲ್ಲಿ ಸುನಾಕ್ ಅವರು ವಿದೇಶಾಂಗ ನೀತಿಯ ಬಗ್ಗೆ ತಮ್ಮ ನಿಲುವನ್ನು ಮುಂದಿಡುವಾಗ ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಟೀಕಿಸಿದರು.

“ಸ್ಪಷ್ಟವಾಗಿ ಹೇಳುತ್ತೇನೆ, ವ್ಯಾಪಾರವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕಾರಣವಾಗುತ್ತದೆ ಎಂಬ ಕಲ್ಪನೆಯ ಜೊತೆಗೆ 'ಸುವರ್ಣ ಯುಗ' ಎಂದು ಕರೆಯಲ್ಪಡುವ ಯು.ಕೆ-ಚೀನಾ ಸಂಬಂಧ ಮುಗಿಯಿತು. ನಿರಂಕುಶ ಅಧಿಕಾರದ ಕಡೆಗೆ ಹೆಚ್ಚಿನ ವೇಗದಲ್ಲಿ ಸಾಗುತ್ತಿರುವ ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ ಎಂದು ನಾವು ಗುರುತಿಸುತ್ತೇವೆ” ಯುಕೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.