ಬ್ರಿಟನ್ ಸಚಿವ ಸ್ಥಾನದಿಂದ ನದೀಮ್ ಝಹಾವಿ ವಜಾ

ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ಆಡಳಿತ ಪಕ್ಷ ಕನ್ಸರ್ವೇಟಿವ್‌ನ ಅಧ್ಯಕ್ಷ ನದೀಮ್ ಝಹಾವಿ ಅವರನ್ನು ತೆರಿಗೆ ವಿವಾದದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಮತ್ತು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ.
ಈ ಬಗ್ಗೆ ಪಕ್ಷದ ನಾಯಕ ಹಾಗೂ ಪ್ರಧಾನಿ ರಿಷಿ ಸುನಕ್ ನಿರ್ಧಾರ ಪ್ರಕಟಿಸಿದ್ದಾರೆ.