ಬೆಂಗಳೂರಿನಲ್ಲಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿದ ಪ್ರಕರಣ; ಮಗ ಸೇರಿದಂತೆ ಇಬ್ಬರು ಅರೆಸ್ಟ್‌

ಬೆಂಗಳೂರಿನಲ್ಲಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿದ ಪ್ರಕರಣ; ಮಗ ಸೇರಿದಂತೆ ಇಬ್ಬರು ಅರೆಸ್ಟ್‌

ಬೆಂಗಳೂರು: ಬೆಂಗಳೂರಿನಲ್ಲಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಮಗ ಸೇರಿದಂತೆ ಆತನ ಸಹಚರರನ್ನು ಮಾರತ್​ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪುತ್ರ ಮಣಿಕಂಠ, ಶಿವಕುಮಾರ್​, ನವೀನ್ ಕುಮಾರ್ ಬಂಧಿತರು.ಫೆ.13ರಂದು ಅಪಾರ್ಟ್​ಮೆಂಟ್​​ನ ಪಾರ್ಕಿಂಗ್​​ ಲಾಟ್​ನಲ್ಲಿ ನಾರಾಯಣಸ್ವಾಮಿ ಎಂಬುವರನ್ನು ಮಗ ಸುಪಾರಿ ಕೊಟ್ಟು ಕೊಲ್ಲಿಸಿದ್ದರು.ಪುತ್ರ ಮಣಿಕಂಠ ಶಿವಕುಮಾರ್​, ನವೀನ್ ಕುಮಾರ್​ಗೆ ಮುಂಗಡವಾಗಿ 1 ಲಕ್ಷ ರೂಪಾಯಿ ನೀಡಿ ತನ್ನ ತಂದೆಯ ಕೊಲೆ ಮಾಡಲು 1 ಕೋಟಿ ರೂ.

ಸುಪಾರಿ ನೀಡಿದ್ದ. ಅದರಂತೆಯೇ ಇಬ್ಬರು ದುಷ್ಕರ್ಮಿಗಳು ನಾರಾಯಣಸ್ವಾಮಿಯನ್ನ ಕೊಲೆ ಮಾಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ
ಈ ಹಿಂದೆ ಮಣಿಕಂಠ ತನ್ನ ಮೊದಲ‌ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದ, ಒಂದು ಹೆಣ್ಣು ಮಗಳಿದ್ದಳು. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು.