ಬಿಹಾರದಲ್ಲಿ ಚಲಿಸುತ್ತಿದ್ದ ರೈಲಿನಡಿ ಜಾರಿ ಬೀಳುತ್ತಿದ್ದ ವ್ಯಕ್ತಿ ರಕ್ಷಿಸಿದ 'RPF ಸಿಬ್ಬಂದಿ' : ವಿಡಿಯೋ ವೈರಲ್

ಬಿಹಾರದಲ್ಲಿ ಚಲಿಸುತ್ತಿದ್ದ ರೈಲಿನಡಿ ಜಾರಿ ಬೀಳುತ್ತಿದ್ದ ವ್ಯಕ್ತಿ ರಕ್ಷಿಸಿದ 'RPF ಸಿಬ್ಬಂದಿ' : ವಿಡಿಯೋ ವೈರಲ್

ಬಿಹಾರ : ರೈಲು ಹತ್ತುವಾಗ ಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು RPF ಸಿಬ್ಬಂದಿ ರಕ್ಷಿಸಿರುವ ಘಟನೆ ಪೂರ್ಣಿಯಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ರೈಲ್ವೆ ಸಚಿವಾಯವು ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.

ಬಿಹಾರದ ಪೂರ್ಣಿಯಾ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗುತ್ತಿದ್ದ ವೇಳೆ ಕಾಲು ಜಾರಿ ರೈಲಿನ ಕೆಳಗೆ ಬೀಳುತ್ತಿದ್ದನು. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಕೂಡಲೇ ತೆರಳಿ ಪ್ರಯಾಣಿಕನನ್ನು ರಕ್ಷಿಸಿರುವುದನ್ನು ನೋಡಬಹುದು.

ಘಟನೆ ಬಗ್ಗೆ ವಿವವರಿಸಿರುವ ರೈಲ್ವೆ ಸಚಿವಾಯ, ದಯವಿಟ್ಟು ಚಲಿಸುತ್ತಿರುವ ರೈಲನ್ನು ಹತ್ತಲು/ಡಿಬೋರ್ಡಿಂಗ್ ಮಾಡಲು ಪ್ರಯತ್ನಿಸಬೇಡಿ ಎಂದು ಮನವಿ ಮಾಡಿದೆ.

ಇನ್ನು ಪ್ರಯಾಣಿಕನನ್ನು ರಕ್ಷಿಸಿದ RPF ಸಿಬ್ಬಂದಿಯ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.