ಬಿಬಿಎಂಪಿ ಮುಖ್ಯ ಆಯುಕ್ತರಿಂದ ಚಿಲುಮೆಗೆ ಅನುಮತಿ; ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಗಂಭೀರ ಚರ್ಚೆ

ಬಿಬಿಎಂಪಿ ಮುಖ್ಯ ಆಯುಕ್ತರಿಂದ ಚಿಲುಮೆಗೆ ಅನುಮತಿ; ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಗಂಭೀರ ಚರ್ಚೆ

ಬೆಂಗಳೂರು: ಚಿಲುಮೆ ಸಂಸ್ಥೆಯ ಮೇಲೆ ಮತದಾರರ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿ ಅರೆಸ್ಟ್ ಆಗಿದ್ದಾರೆ. ಸದ್ಯ ಅಧಿಕೃತವಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿ ವರ್ಗದಲ್ಲೇ ಗಂಭೀರ ಚರ್ಚೆ ಶುರುವಾಗಿದೆ.

ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು ಎಂದು ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದರು. ಬೇರೆ ಯಾವುದೇ ಕೆಲಸಕ್ಕೆ ಅವಕಾಶ ನೀಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದರು. ಆದರೆ, ಚಿಲುಮೆ ಸಂಸ್ಥೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಬಿಬಿಎಂಪಿ ಕಮಿಷನರ್​ರೇ ಅನುಮತಿ ಕೊಟ್ಟಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು 20-8-2022 ರಂದು ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ಬರೆದಿದ್ದಾರೆ.
ಉಚಿತವಾಗಿ Voter helpline app ಹಾಗೂ ಗರುಡಾ ಆಯಪ್ ಮೂಲಕ ವೋಟರ್ ಐಡಿಗಳನ್ನ ಆಧಾರ್ ಲಿಂಕ್ ಮಾಡುತ್ತೇವೆ ಎಂದು ಮನವಿ ಸಲ್ಲಿಸಿದ್ದ ಚಿಲುಮೆ ಸಂಸ್ಥೆಗೆ ತುಷಾರ್ ಗಿರಿನಾಥ್ ಅನುಮತಿ ನೀಡಿದ್ದಾರೆ.