ಮಂಡ್ಯದಲ್ಲಿ ಆರ್.ಅಶೋಕ್ ವಿರುದ್ಧ 'ಗೋ ಬ್ಯಾಕ್ ಅಭಿಯಾನ' ಶುರು : ಬಿಜೆಪಿಗರಿಂದಲೇ 'ಭಾರೀ ವಿರೋಧ'
ಮಂಡ್ಯ : ಜಿಲ್ಲಾ ಉಸ್ತುವಾರಿ ಆರ್.ಅಶೋಕ್ ನೇಮಕಗೊಂಡ ಹಿನ್ನೆಲೆ ಬಿಜೆಪಿಗರಿಂದಲೇ ಭಾರೀ ವಿರೋಧ ಶುರುವಾಗಿದೆ. ಇದೀಗ ಸೋಷಿಯಲ್ ಮೀಡಿಯಾ , ನಗರದ ಗೋಡೆಗಳಲ್ಲಿ ಪೋಸ್ಟರ್ ಹಾಕುವ ಮೂಲಕ ʻಗೋ ಬ್ಯಾಕ್ ಎಂಬ ಅಭಿಯಾನʼ ಕಿಡಿಕಾರಿದ್ದಾರೆ.ಸಚಿವ ಆರ್.ಅಶೋಕ್ ವಿರುದ್ಧ ಮಂಡ್ಯ ಆರ್ . ಪಿ ರಸ್ತೆಯ ಗೋಡೆಗಳಲ್ಲಿ ಗೋ ಬ್ಯಾಕ್ ಅಶೋಕ್ ಎಂಬ ಪೋಸ್ಟರ್ ಹಾಕಲಾಗಿದೆ.ಇಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪಕ್ಷ , ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಸಹಿಸುವುದಿಲ್ಲ. ನಾವು ಬಿಜೆಪಿ ಕಾರ್ಯಕರ್ತರು. ಗೋ ಬ್ಯಾಕ್ ಆರ್.ಅಶೋಕ್. ಮಂಡ್ಯದ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರೇ ಸಾಕು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸ್ಕೊತ್ತೀವಿ. ದಯವಿಟ್ಟು ನೀವು ವಾಪಸ್ ಹೋಗಿ ಎಂದು ಅಶೋಕ್ ಗೋಬ್ಯಾಕ್ ಎಂಬ ಅಭಿಯಾನ ಮಾಡುವ ಮೂಲಕ ಕಿಡಿ ಕಾರಿದ್ದಾರೆ.